ಕಾರಕ್ಕಿ ಶ್ರೀ ಭದ್ರಾ ಮಹಾಗಣಪತಿ ಮತ್ತು ಪರಿವಾರ ದೇವರ ಜೀರ್ಣೊದ್ಧಾರ,ಪುನರಷ್ಟಬಂಧ, ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ
ಕಳಸ:ಕಳಸ ತಾಲ್ಲೂಕಿನ ಕೆ.ಕೆಳಗೂರು ಕಾರಕ್ಕಿ-ಹೊಸಗದ್ದೆ ಶ್ರೀ ಭದ್ರಾ ಮಹಾಗಣಪತಿ ದೇವಸ್ಥಾನದ ಶ್ರೀ ಭದ್ರಾ ಮಹಾಗಣಪತಿ ಮತ್ತು ಪರಿವಾರ ದೇವರ ಜೀರ್ಣೊದ್ಧಾರ,ಪುನರಷ್ಟಬಂಧ, ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಎ 22 ರಂದು ಗುರುಪ್ರಾರ್ಥನೆ,ಗಣಪತಿ ಪೂಜೆ,ಪುಣ್ಯಾಹವಾಚನ,ನಾಂದಿ,ಋತ್ವಿಗ್ವರಣೆ,ಬಿಂಬಶುದ್ದಿ.ಸಾಯಂಕಾಲ ಸ್ಥಾನಶುದ್ದಿ,ಪ್ರಾಸಾದಶುದ್ದಿ,ವಾಸ್ತುರಾಕ್ಷೋಘ್ನ ಹೋಮ,ವಾಸ್ತುಪೂಜಾ ಬಲಿ,ಪ್ರತಿಷ್ಠಾಧಿವಾಸಾದಿ ಹೋಮಗಳೊಂದಿಗೆ ಆರಂಭಗೊಂಡು
ಏ 23ರಂದು ಬೆಳಿಗ್ಗೆ ರತ್ನನ್ಯಾಸಪೂರ್ವಕ ಅಷ್ಟಬಂಧ ಸಂಯೋಜನೆ,ಕಲಾತತ್ವಾಧಿವಾಸ ಹೋಮ,ಪ್ರತಿಷ್ಠಾನ್ಯಾಸ,ಪ್ರಾಣಪ್ರತಿಷ್ಠೆ.ಸಾಯಂಕಾಲ ಬ್ರಹ್ಮಕುಂಭ ಪ್ರತಿಷ್ಠೆ, ಆಧಿವಾಸಹೋಮಗಳು ನಡೆದು
ಎ24ರಂದು ಶಾಂತಿ ಹೋಮ,ಪ್ರಾಯಶ್ಚಿತ್ತಹೋಮ.ಬೆಳಿಗ್ಗೆ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಗಮನದ ನಂತರ ಸಪರಿವಾರ ಶ್ರೀ ಮಹಾಗಣಪತಿ ದೇವರಿಗೆ ಜಗದ್ಗುರು ಮಹಾಸ್ವಾಮಿಗಳಿಂದ ಬ್ರಹ್ಮಕುಂಭಾಭಿಷೇಕ ಮಹಾಪೂಜೆ,ಅನುಗ್ರಹ ಭಾಷಣ,ಮಂತ್ರಾಕ್ಷತೆ ನಡೆಯಿತು.