ಕಳಸ ಲೈವ್ ವರದಿ
ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ2023-24ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಕಾಲೇಜಿನ ಬಿ.ಕಾಂ ವಿಭಾಗದಲ್ಲಿ ಅನ್ನಪೂರ್ಣಕೆ.ಆರ್ ಶೇ.89% ಪಡೆದು ಕಾಲೇಜಿಗೆ ಪ್ರಥಮ, ಸೌಂದರ್ಯ ಶೇ. 85.64% ಪಡೆದು ದ್ವಿತೀಯ ಸ್ಥಾನವನ್ನು ಹಾಗೂ ಬಿ.ಎ ವಿಭಾಗದಲ್ಲಿ ಮಹಮ್ಮದ್ ಇರ್ಫಾನ್ಎ.ಎಸ್ ಶೇ. 84.5% ಪಡೆದು ಪ್ರಥಮ ಸ್ಥಾನ ಮತ್ತು ವಿನುತಾ ಹೆಚ್.ವಿ ಶೇ.83.57% ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕಾಲೇಜಿನಬಿ.ಕಾಂ ವಿಭಾಗವು ಶೇ.81.81% ಮತ್ತು ಬಿ.ಎ ವಿಭಾಗವು ಶೇ.81.25% ಫಲಿತಾಂಶವನ್ನು ಪಡೆದಿದ್ದು, ಒಟ್ಟಾರೆಯಾಗಿ ಪರೀಕ್ಷೆ ಬರೆದವರಲ್ಲಿ ಶೇ.81.52% ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆಂದು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಅಂತಿಮ ಪದವಿ ಪರೀಕ್ಷೆಯ ಮೇಲ್ಕಂಡ ಫಲಿತಾಂಶಕ್ಕೆ ಕಾರಣರಾದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ವರ್ಗದವರಿಗೆ ಹಾಗೂ ಪ್ರಾಂಶುಪಾಲರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ರವರು ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸಿದರು.