ಕಳಸ ಲೈವ್ ವರದಿ
ಕಳಸ ತಾಲೂಕು ತನೂಡಿ ಗ್ರಾಮದ ಶಂಕರಕೊಡಿಗೆಯಿAದ ಗಣಪತಿಕಟ್ಟೆಗೆ ಹೋಗುವ ರಸ್ತೆಯ ಮೋರಿಯು ಭಾರಿ ಮಳೆಯಿಂದ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದು ಈ ಭಾಗದ ಗ್ರಾಮಸ್ಥರಿಗೆ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ರಸ್ತೆಯೇ ಇಲ್ಲವಾಗಿದೆ. ಸ್ಥಳಕ್ಕಾಗಮಿಸಿದ ತೋಟದೂರು ಪಿಡಿಒ ಮೋರಿಯನ್ನು ಪರಿಶೀಲಿಸಿ ಇಂಜಿನಿಯರ್ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
ಸೋಮೇಶ್ವರಖಾನ್ ನಿಂದ ಶಂಕರಕೊಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯು ಈ ಬಾರಿ ಸುರಿದ ಭಾರಿ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು ವಾಹನ ಓಡಾಡಲಾರದಂತಾಗಿದೆ ನೇಪಾ ದೇವಸ್ಥಾನದ ಬಳಿ ಚರಂಡಿ ಇಲ್ಲದೇ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆಗೆ ತಡೆಗೋಡೆ ಇಲ್ಲದೇ ಸಂಪೂರ್ಣ ಕುಸಿಯುವ ಆತಂಕದಲ್ಲಿದ್ದೆವೆ.
ಈ ಹಿಂದೆ ಹಲವು ಭಾರಿ ಈ ರಸ್ತೆ ಸಮಸ್ಯೆ ಬಗ್ಗೆ ಪ್ರತಿಭಟಿಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಸ್ತೆ ದುರಸ್ಥಿ ಮಾಡಲಿಲ್ಲ ಇದೀಗ ಭಾರಿ ಮಳೆಗೆ ಸಂಪೂರ್ಣ ಹದಗೆಟ್ಟಿದೆ ಎಂದು ಶಂಕರಕೊಡಿಗೆ ರಂಜಿತ್ ಮಾಹಿತಿ ನೀಡಿದ್ದಾರೆ.