ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಸುರಿದ ಮಹಾ ಮಳೆಗೆ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ, ನದಿಯ ನೀರು ನುಗ್ಗಿ ರಸ್ತೆ ಕಡಿತಗಳು ಉಂಟಾಗಿದೆ.
ಎರಡು ದಿನ ಬಿಡುವು ನೀಡಿದ ಮಳೆ ಸೋಮವಾರ ರಾತ್ರಿಯಿಂದ ಮತ್ತೆ ಸುರಿಯಲಾರಂಬಿಸಿದ್ದು, ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯಿತು. ಬಾರಿ ಮಳೆ ಅಲ್ಲಲ್ಲಿ ಗುಡ್ಡ ಕುಸಿತದಿಂದ ಕಳಸ ಪಟ್ಟಣಕ್ಕೆ ಬರುವ ಕಳಸ-ಕೊಟ್ಟಿಗೆಹಾರ ರಸ್ತೆ ಹೊರತು ಪಡಿಸಿ ಎಲ್ಲಾ ರಸ್ತೆ ಸಂಪರ್ಕ ಕೆಲ ಕಾಲ ಕಡಿತಗೊಂಡಿತ್ತು ಆದರೆ ಹೊರನಾಡಿಗೆ ಹೋಗುವ ಎಲ್ಲಾ ರಸ್ತೆಗಳ ಸಂಪರ್ಕವೂ ಕೆಲ ಕಾಲ ಕಡಿತಗೊಂಡಿತ್ತು.
ಭದ್ರಾ ನದಿಯಲ್ಲಿ ನೀರು ಹೆಚ್ಚಳಗೊಂಡ ಪರಿಣಾಮ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ನೆಲ್ಲಿಬೀಡು ಎಂAಬಲ್ಲಿ ಭದ್ರಾ ನದಿಯ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು.ಕಳಸ-ಕಳಕೋಡು ರಸ್ತೆ ಮದ್ಯೆ ಕೊಳಮಗೆ ಎಂಬಲ್ಲಿ ರಸ್ತೆಗೆ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು.ಹಿರೇಬೈಲು-ಬಾಳೆಹೊಳೆ ರಸ್ತೆ ಚನ್ನಡ್ಲು ಪ್ರದೇಶದಲ್ಲಿ ಗುಡ್ಡ ಜರಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತು.
ಹೊರನಾಡು-ಬಲಿಗೆ ರಸ್ತೆ ಮೇಲ್ಮಂಚಿಗೆ ಎಂಬಲ್ಲಿ ರಸ್ತೆಗೆ ಗುಡ್ಡ ಜರಿದು ಬಿದ್ದು ರಸ್ತೆ ರಸ್ತೆ ಸಂಪರ್ಕ ಕಡಿತಗೊಂಡಿತು. ಹೊರನಾಡು-ಕವನಳ್ಳ ರಸ್ತೆ ಮದ್ಯೆ ಮಾವಿನಹೊಲ ಎಂಬಲ್ಲಿ ರಸ್ತೆ ಗುಡ್ಡ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳುವಳ್ಳಿ-ಹೊರನಾಡು ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರ ಕಡಿತಗೊಂಡಿತ್ತು.
ಹೊರನಾಡು ಸೋಮನಕಟ್ಟೆ ಎಂಬಲ್ಲಿ ಸುನಂದ ಎಂಬುವವರ ಮನೆಗೆ ಗುಡ್ಡ ಜರಿದು ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ನಾಲ್ವರನ್ನು ರಕ್ಷಿಸಿ ಕಳಸದ ಕಳಾಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತಿಪಾಲ ಶ್ರೀನಿವಾಸ ಎಂಬುವವರ ಮನೆ ಸಮೀಪ ಗುಡ್ಡ ಜರಿದು ಬಿದ್ದಿದೆ.ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಂದೂರು ಶ್ರೀನಿವಾಸ ಎಂಬುವವರ ಮನೆಗೆ ಗುಡ್ಡ ಜರಿದು ಬಿದ್ದು ಹಾನಿಯಾಗಿದೆ. ಕಚಗಾನೆ ಬಳಿ ದರೆ ಕುಸಿತಗೊಂಡಿದೆ. ಕೊಳಮಗೆ ಇವರ ಮನೆ ಹಿಂದೆ ಗುಡ್ಡ ಕುಸಿದಿದೆ ಅವರ ಕುಟುಂಬಕ್ಕೆ ಕಳಸ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.