ಕಳಸ ಲೈವ್ ವರದಿ
ಫ್ರೆಂಡ್ಸ್ ಕಳಸ ಇವರ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
26ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯ ಪ್ರಯುಕ್ತ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಅರಳಿಕಟ್ಟೆಯವರೆಗೆ ಸಾಗಿ ನಂತರ ಕಳಸದ ಶ್ರೀ ಗಿರಿಜಾಂಬ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ದೇಶ ಪ್ರೇಮಿಗಳು ಮೆರವಣಿಗೆಯುದ್ದಕ್ಕೂ ಘೋಷನೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ನಂತರ ದುರ್ಗಾ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ ಯೋದರುಗಳಾದ ಪ್ರಸನ್ನ, ಮೆಹಬೂಬ್ ಇವರು ತಮ್ಮ ಕರ್ತವ್ಯ ಸಂದರ್ಭದ ಘಟನೆಗಳನ್ನು ನೆನಪಿಸಿಕೊಂಡರು. ಜೆಇಎಂ ಶಿಕ್ಷಕ ಪ್ರಶಾಂತ್ ದಿಕ್ಕೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಫ್ರೆಂಡ್ಸ್ ಕಳಸದ ಅಧ್ಯಕ್ಷ ಮಾರುತೇಶ್, ಹೊರನಾಡು ಪಂ ಅಭಿವೃದ್ಧಿ ಅಧಿಕಾರಿ ಅರುಣ್ ಇದ್ದರು.