ಕಳಸ ಲೈವ್ ವರದಿ
2019ರ ಮಹಾ ಮಳೆಗೆ ಕಳಸ ಕಲಶೇಶ್ವರ ದೇವಸ್ಥಾನದ ತಡೆಗೋಡೆಗಳು ಅಲ್ಲಲ್ಲಿ ಕುಸಿದು ಹೋಗಿತ್ತು ಆದರೆ ಇದನ್ನು ದುರಸ್ಥಿ ಪಡಿಸಿರಲಿಲ್ಲ ಈ ಬಗ್ಗೆ ಕಳಸ ಲೈವ್ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದು ಕೊರತೆ ವಿಭಾಗ ಜನಸ್ಪಂದನಕ್ಕೆ ದೂರು ಸಲ್ಲಿಸಿತ್ತು.
ಈ ದೂರಿಗೆ ಸಿಎಂ ಕಚೇರಿಯಿಂದ ಸ್ಪಂದನೆ ದೊರೆತಿದ್ದು ಪ್ರಸಕ್ತ ಸಾಲಿನ ಮಳೆ ಹಾನಿ ಲೆಕ್ಕ ಶಿರ್ಷಿಕೆ ಅಡಿಯಲ್ಲಿ ಒಂದು ಕೋಟಿ ಅನುದಾನ ಕೋರಿ ಸಲ್ಲಿಸಲಾಗಿದೆ ಅನುದಾನ ದೊರೆತ ಕೂಡಲೇ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಪತ್ರದಲ್ಲಿ ತಿಳಿಸಿದೆ.ಅಲ್ಲದೆ ಸಂಸೆ ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಕೈಪಿಡಿ ಶಿಥಿಲಗೊಂಡಿರುವ ಬಗ್ಗೆಯೂ ದೂರು ನೀಡಲಾಗಿತ್ತು ಇದಕ್ಕೂ ಸ್ಪಂದಿಸಿ ಪ್ರಸಕ್ತ ಸಾಲಿನ ವಾರ್ಷಿಕ ನಿರ್ವಹಣೆ ಅಡಿಯಲ್ಲಿ ಕಾಮಗಾರಿ ಕೈಗೆತ್ತಕೊಳ್ಳುವ ಭರವಸೆ ನೀಡಿದೆ.
ಕಳೆದ ಕೆಲದಿನಗಳ ಹಿಂದೆಯಷ್ಟೆ ಕಳಸ-ಕಂಚಿನಕೆರೆಗೆ ಹೋಗುವ ರಸ್ತೆ ಕುಸಿತದ ಬಗ್ಗೆಯೂ ದೂರು ನೀಡಲಾಗಿತ್ತು ಇದಕ್ಕೂ ಸ್ಪಂದಿಸಿ, ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗ ಮೂಡಿಗೆರೆ ಇವರು ಸ್ಥಳ ಪರಿಶೀಲನೆ ಮಾಡಿ ರಸ್ತೆಯ ಬಿರುಕು ಕಾಣಿಸಿಕೊಂಡ ಸ್ಥಳಕ್ಕೆ 20 ಮೀಟರ್ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷಗಳ ಹಾನಿಯ ಅಂದಾಜು ಮೊತ್ತವನ್ನು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವಣೆಯನ್ನು ಸಲ್ಲಿದ್ದಾರೆ.
ತುರ್ತು ಸ್ಪಂದನೆ ನೀಡಿದ ಸಿಎಂ ಕಚೇರಿ ಜನ ಸ್ಪಂದನಾ ವಿಭಾಗದ ಕಾರ್ಯ ಶ್ಲಾಘನೀಯವಾಗಿದೆ.
Related Stories
October 6, 2024