ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಸ್ವಲ್ಪ ಮಟ್ಟಿಗೆ ಮಳೆಯ ಅಬ್ಬರ ಕಡಿಮೆಯಾದರೂ ಕೂಡ ಮಳೆಯ ಹಾನಿ ಮಾತ್ರ ಮುಂದುವರೆದಿದೆ.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳುವಳ್ಳಿ ತಾರಿಕೊಂಡ ರಮೇಶ್ ಎಂಬುವವರ ಮನೆ ಕುಸಿದು ಹೋಗಿದ್ದು, ಸಾಕಷ್ಟು ಹಾನಿಯಾಗಿದೆ. ಸ್ಥಳಕ್ಕೆ ಕಳಸ ಗ್ರಾಮ ¥ಪಂಚಾಯಿತಿ ಸದಸ್ಯ ವೀರೇಂದ್ರ ಜೈನ್, ವಿಎ ಪ್ರಸನ್ನ ಪರಿಶೀಲನೆ ಮಾಡಿದ್ದಾರೆ. ಇದೇ ಪಂಚಾಯಿತಿ ವ್ಯಾಪ್ತಿಯ ಕಾರಗದ್ದೆ ಆನಂದ ಶೆಟ್ಟಿ ಅವರ ಹಳೇ ಮನೆಗೆ ಮರ ಬಿದ್ದು ಮನೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಕ್ಕಿ -ಬರಗಲ್ ರಸ್ತೆಯು ಮಾಟರಹಳ್ಳಿ ಎಂಬಲ್ಲಿ ಕುಸಿದು ಹೋಗಿದ್ದು ವಾಹನಗಳು ಓಡಾಡಲು ತೊಂದರೆ ಆಗುತ್ತಿದೆ.ಇದೇ ಪಂ ವ್ಯಾಪ್ತಿಯ ಯಳಂದೂರು ಮೀನಾಕ್ಷಮ್ಮ ಎಂಬುವವರ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿಯಾಗಿದೆ ಸ್ಥಳಕ್ಕೆ ಇಡಕಣಿ ಪಂಚಾಯಿತಿ ಅಧಿಕಾರಿ ಗಣೇಶ್, ವಿ.ಎ ಪ್ರದೀಪ್ ಬೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.