ಕಳಸ ಲೈವ್ ವರದಿ
ಕಳಸ-ಕಂಚಿನಕೆರೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಈ ರಸ್ತೆಯು ಕಳಸದಿಂದ ಕಂಚಿನಕೆರೆ, ಕಾಳಿಕೆರೆ, ಮುಂಡಾಣೆ, ಕೊಂಡದಮನೆ, ಮಾಗಲ್, ವಶಿಷ್ಠತೀರ್ಥಕ್ಕೆ ಹೋಗುವ ರಸ್ತೆಯಾಗಿದ್ದು, ಈ ಭಾಗದಲ್ಲಿ ನೂರಾರು ಮನೆಗಳಿವೆ ಅಲ್ಲದೆ ವಶಿಷ್ಠ ತೀರ್ಥದಲ್ಲಿರುವ ತೂಗು ಸೇತುವೆಯನ್ನು ವೀಕ್ಷಿಸಲು ಇದೇ ರಸ್ಥೆಯನ್ನು ಅವಲಂಬಿಸಿ ನೂರಾರು ಪ್ರವಾಸಿಗರು ಬರುತ್ತಾರೆ.ಆದರೆ ಇದೀಗ ಈ ರಸ್ತೆಯ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ರಸ್ತೆ ಬಿರುಕು ಕಾಣಿಸಿಕೊಂಡಿದ್ದ ಸಮೀಪವೇ ಮನೆಯೊಂದಿದ್ದು ಆ ಮನೆಗೂ ಅಪಾಯ ಎದುರಾಗಿದೆ.
Related Stories
September 6, 2024