ಕಳಸ ಲೈವ್ ವರದಿ
ಕ್ಯಾತನಮಕ್ಕಿ ಗಾಳಿಗುಡ್ಡಕ್ಕೆ ಬೈಕ್ ಹಾಗೂ ಇತರೆ ಖಾಸಗಿ ವಾಹನಗಳು ತೆರಳುತ್ತಿದ್ದು, ಈ ಕುರಿತು ಹಲವಾರು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಈ ಹಿಂದಿನ ಗ್ರಾಮ ಅರಣ್ಯ ಸಮಿತಿಯ ಸಭಾ ನಡಾವಳಿಯಲ್ಲಿ ತೀರ್ಮಾನಿಸಿದಂತೆ, ಗ್ರಾಮ ಅರಣ್ಯ ಸಮಿತಿಯಲ್ಲಿ ನೋಂದಣಿಯಾದ ಜೀಪ್ ಹಾಗೂ ಪಿಕ್ಅಪ್ಗಳನ್ನು ಮಾತ್ರ ಕ್ಯಾತನಮಕ್ಕಿ ಗಾಳಿಗುಡ್ಡಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಅನುಮತಿ ನೀಡಲಾಗಿದೆ.
ಕ್ಯಾತನಮಕ್ಕಿ ಗಾಳಿಗುಡ್ಡಕ್ಕೆ ಪ್ರವಾಸಿಗರನ್ನು ಕರೆದೊಯ್ಯುವಂತಹ ಜೀಪ್ ಹಾಗೂ ಪಿಕ್ಅಪ್ ವಾಹನಗಳನ್ನು ಈ ಕೂಡಲೇ ದಿನಾಂಕ:01-07-2024ರಿಂದ 10-07-2024ರವರೆಗೆ ಕಡ್ಡಾಯವಾಗಿ 06 ತಿಂಗಳಿಗೆ ರೂ.1250.00 ಹಾಗೂ 01 ವರ್ಷಕ್ಕೆ ರೂ.2500.00ಗಳಂತೆ ಪಾವತಿಸಿ ಗ್ರಾಮ ಅರಣ್ಯ ಸಮಿತಿಗೆ ನೋಂದಣಿ ಮಾಡಿ ಬ್ಯಾಡ್ಜ್ಗಳನ್ನು ಪಡೆದುಕೊಳ್ಳತಕ್ಕದ್ದು. ನಿಗದಿ ಪಡಿಸಿದ ದಿನಾಂಕದ ನಂತರ ಗ್ರಾಮ ಅರಣ್ಯ ಸಮಿತಿಗೆ ನೋಂದಣಿಯಾಗದ ಯಾವುದೇ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗುತ್ತದೆ ಹಾಗೂ ಗ್ರಾಮ ಅರಣ್ಯ ಸಮಿತಿಗೆ ನೋಂದಣಿಯಾದ ಜೀಪ್ಗಳಲ್ಲಿ ಗರಿಷ್ಠ 07 ಜನ ಪ್ರವಾಸಿಗರಿಗೆ ಮತ್ತು ನೋಂದಣಿಯಾದ ಪಿಕ್ಅಪ್ಗಳಲ್ಲಿ ಗರಿಷ್ಠ 12 ಜನರಿಗೆ ಮಾತ್ರ ಅವಕಾಶ ನೀಡತಕ್ಕದ್ದು. ಸದರಿ ಪ್ರದೇಶವು ರಕ್ಷಿತಾರಣ್ಯದ ವ್ಯಾಪ್ತಿಗೆ ಸೇರಿರುವುದರಿಂದ ಎಲ್ಲಾ ರೀತಿಯ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ತಿಳಿಸಿದ್ದಾರೆ.
Related Stories
September 6, 2024