ಕಳಸ ಲೈವ್ ವರದಿ
ಮೂಡಿಗೆರೆ. ಹಿರಿಯ ಪರ್ತಕರ್ತ ಸುಂದರ ಬಂಗೇರಾ (70) ಆನಾರೋಗ್ಯದಿಂದಾಗಿ ಸೋಮವಾರ ರಾತ್ರಿ ಬಿಳಗುಳದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು 2003ರಿಂದ ಪಾಕ್ಷಿಕ ಪತ್ರಿಕೆ ಯೊಂದನ್ನು ನಡೆಸುತ್ತಿದ್ದರು. ಅದಕ್ಕೂ ಮೊದಲು ಬಹಳ ಕಾಲ ಟೈಲರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಅನೇಕ ಕವನ ಸಂಕಲನ, ಕಾದಂಬರಿ ಬರೆದು ಪ್ರಕಟಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡಿದ್ದರು. ಮೃತರಿಗೆ ಪತ್ನಿ, ಓರ್ವ ವಿವಾಹಿತ ಪುತ್ರಿ ಇದ್ದಾರೆ. ಮೃತರ ನಿಧನದ ಸುದ್ದಿ ತಿಳಿದು ಟೈಲರ್ ಸಂಘದ ಸದಸ್ಯರು, ಪರ್ತಕರ್ತರು ಸಾರ್ವಜನಿಕರು ಆಗಮಿಸಿ ಮೃತರಿಗೆ ಅಂತಿಮನಮನ ಸಲ್ಲಿಸಿದರು.