ಕಳಸ ಲೈವ್ ವರದಿ
ತಾಂತ್ರಿಕ ಶಿಕ್ಷಣವನ್ನು ಪಡೆದು ಸ್ವ-ಉದ್ಯೋಗ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಉತ್ತಮ ಎನ್ನುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದುಃಖಿತ ಮುಖದಲ್ಲಿ ಸಂತೋಷದ ನಗುವನ್ನು ತುಂಬಲು ವಿವಿಧ ಕಡೆಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವುಗಳಲ್ಲಿ ಸಂಸೆಯಲ್ಲಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಭೇತಿ ಸಂಸ್ಥೆಯೂ ಒಂದು
ಐ.ಟಿ.ಐ.ಯ ವಿಶೇಷತೆ:
ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಪ್ರಥಮ/ ದ್ವಿತೀಯ ಪಿ.ಯು.ಸಿ. ಅನುತ್ತೀರ್ಣಗೊಂಡಿದ್ದೇವೆ ಅಥವಾ ಕಡಿಮೆ ಅಂಕ ಬಂದಿದೆ- ಮುಂದೇನು? ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ಅಥವಾ ಆರ್ಥಿಕವಾಗಿ ಮುಗ್ಗಟ್ಟನ್ನು ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ/ ಹೆತ್ತವರಿಗೆ ಶೇಕಡಾ 100 ರಷ್ಟು ಉದ್ಯೋಗದ ಭರವಸೆಯೊಂದಿಗೆ ಮಕ್ಕಳಿಗೆ ಒಳ್ಳೆಯ ಜೀವನ ಕೌಶಲವನ್ನು ಕಲಿಸುವುದರ ಜೊತೆಗೆ ಅನೇಕ ನೊಂದವರ ಪಾಲಿಗೆ ಬೆಳಕಾಗಿರುವ ಸಂಸೆ ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ ಹಾಗೂ ಸ್ವ-ಉದ್ಯೋಗ ಮತ್ತು ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಕಳೆದ ಹಲವಾರು ವರುಷಗಳಿಂದ ಪ್ರಯತ್ನಿಸುತ್ತಾ ಬಂದಿದೆ.
ಸಂಸ್ಥೆಯ ವೈಶಿಷ್ಟ್ಯ ಗಳು
ಅನುಭವಸ್ಥ ಹಾಗೂ ಕೌಶಲ ಪ್ರಾವೀಣ್ಯ ಬೋಧಕ ವರ್ಗ, ಅತ್ಯುತ್ತಮ ಉಪಕರಣ ಒಳಗೊಂಡಿರುವ ಪ್ರಯೋಗಿಕ ಕಾರ್ಯಗಾರ, ವ್ಯವಸ್ಥಿತ ಗ್ರಂಥಾಲಯ, ವೆಲ್ಡರ್ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ MIG ಮತ್ತು TIG Resistance (spot welding), ಬಾಲಕರಿಗೆ ಹಾಸ್ಟೆಲ್ ವ್ಯವಸ್ಥೆ, ಸುಸಜ್ಜಿತ ಕಟ್ಟಡಗಳು, ವಿಶಾಲವಾದ ತರಗತಿ ಕೊಠಡಿಗಳು, ಸರ್ಕಾರ ನೀಡುವ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ, ಶ್ರೀ ಧರ್ಮಸ್ಥಳ ವಿದ್ಯಾಸಂಸ್ಥೆಯಿಂದ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ, Multiskill ತರಬೇತಿ , Advanceed technology ಯೊಂದಿಗೆ ತರಬೇತಿ , ಕಂಪ್ಯೂಟರ್ ಶಿಕ್ಷಣ , ಉತ್ತಮ ಫಲಿತಾಂಶ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಉತ್ತಮ ಸಂಸ್ಥೆ , ವಾರ್ಷಿಕ ಪರೀಕ್ಷೆ ಮಾದರಿಯಲ್ಲಿಯೇ ಪ್ರತಿ ತಿಂಗಳು ಮಾಸಿಕ ಪರೀಕ್ಷೆ , S.M.S ಮುಖಾಂತರ ಪೋಷಕರಿಗೆ ಗೈರು ಹಾಜರಿ /ಪ್ರಗತಿ ವರದಿ , ಸೀಮಿತ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ, ಸ್ವಯಂ ಉದ್ಯೋಗಕ್ಕೆ ಉತ್ತೇಜನ , ತರಬೇತಿ ಅವಧಿಯಲ್ಲಿ ಕೈಗಾರಿಕೆಗಳ ಭೇಟಿ / ತರಬೇತಿ, ಅಂತರ್ಜಾಲ (internet ) ಸೌಲಭ್ಯ, ಮಧ್ಯಾಹ್ನದ ಊಟಕ್ಕೆ ಮಿಸ್ ವ್ಯವಸ್ಥೆ .
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ITI ಸಂಸೆ ಇಲ್ಲಿ ವ್ಯಾಸಂಗ ಮಾಡಿ ಆಗಸ್ಟ್ ನಲ್ಲಿ.ನಡೆಯುವ ಅಂತಿಮ ಪರೀಕ್ಷೆಗೂ ಮುನ್ನವೇ ಪ್ರತಿಷ್ಠಿತ ಕಂಪನಿಯಾದ. TOYOT0 MOTORS BENGALURU ಇಲ್ಲಿಗೆ 64 ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ. VOLVO ಕಂಪನಿಗೆ 6 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ .MAHINDRA ಕಂಪನಿಗೆ 23 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. BOSCH ಕಂಪನಿಗೆ 25 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.UIN MECH ಕಂಪನಿಗೆ 5 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.HONDA ಕಂಪನಿಗೆ 1 ವಿದ್ಯಾರ್ಥಿ ಆಯ್ಕೆಯಾಗಿರುತ್ತಾನೆ. L AND T ಕಂಪನಿಗೆ 8 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ADHWITH HONDA ಕಂಪನಿಗೆ 19ವಿದ್ಯಾರ್ಥಿಗಳು.ಆಯ್ಕೆಯಾಗಿರುತ್ತಾರೆ.RUD.SET ಸಂಸ್ಥೆಯಿಂದ 29 ವಿದ್ಯಾರ್ಥಿಗಳು ಮೋಟರ್ ರಿವೈಂಡಿಂಗ್ , ಟಿವಿ ರಿಪೇರಿ ಮತ್ತು ಸಿಸಿಟಿವಿ ಕ್ಯಾಮರಾ ವಿಶೇಷ ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಗಳಿಗೆ ಆಡಳಿತ ಮಂಡಳಿ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಮತ್ತು ಪೋಷಕರಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
2024-25 ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಸಂಸ್ಥೆಗೆ ಮುಖತಃ ಭೇಟಿನೀಡಿ ಪ್ರವೇಶ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8310875142, 9481410584, 8310273183