ಕಳಸ ಲೈವ್ ವರದಿ
ಶಾಸಕಿ ನಯನಾ ಮೋಟಮ್ಮ ಅವರು ಕುದುರೆಮುಖ ಗಿರಿ ಶ್ರೇಣಿಗೆ ಚಾರಣ ಕೈಗೊಂಡರು.
ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಗಣೇಶ್, ಕಾಂಗ್ರೆಸ್ ಮುಖಂಡರಾದ ಸುಜಿತ್ ಬೆಳ್ಳ, ಶ್ರೀನಿವಾಸ, ಪ್ರವೀಣ್, ಸಂಶುದ್ದೀನ್, ಕುದುರೆಮುಖ ಆರ್ಎಫ್ಒ ಜ್ಯೋತಿ ಮೆಣಸಿನಕಾಯಿ, ಬೆಳ್ತಂಗಡಿ ಆರ್ಎಫ್ಒ ಸ್ವಾತಿ, ಕಳಸ ಪಿಎಸೈ ಬರ್ಮಪ್ಪ ಬೆಳಗಲಿ, ಕುದುರೆಮುಖ ಪಿಎಸೈ ಆದರ್ಶ್ ಗೌಡ ಅವರೊಂದಿಗೆ ಕುದುರೆಮುಖ ಗಿರಿ ಶ್ರೇಣಿಗೆ ಚಾರಣ ನಡೆಸಿದರು.
ದಾರಿಯುದ್ದಕ್ಕೂ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸುಮಾರು ಐದು ಕಿಮೀ ದೂರ ಚಾರಣವನ್ನು ಕೈಗೊಂಡು ಕುದುರೆಮುಖ ಗಿರಿಶ್ರೇಣಿಯ ಪ್ರಕೃತಿ ಸೌಂದರ್ಯದ ಸವಿಯನ್ನು ಸವಿದರು.
ಈ ಸಂದರ್ಭದಲ್ಲಿ ಗಿರಿಶ್ರೇಣಿಯಲ್ಲಿ ಸಚ್ಚತೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಗಿರಿಶ್ರೇಣಿಗೆ ಬರುವ ಚಾರಣಗರು ಸ್ವಚ್ಚತೆಯನ್ನು ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖಾ ಅಧಿಕಾರಿಗಳ ಬಳಿ ಕೇಳಿಕೊಂಡರು.