ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗಿಡ ನೆಡುವುದರ ಮುಖಾಂತರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ಅವರ ನೇತ್ರತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಲೆಯ ಆವರಣದಲ್ಲಿ ವಿವಿಧ ತಳಿಯ ಹಣ್ಣುಗಳ ಗಿಡಗಳನ್ನು ನೆಡಲಾಯಿತು. ಗಿಡ ನೆಡುವುದು ಮುಖ್ಯವಲ್ಲ ನೆಟ್ಟ ಗಿಡಗಳನ್ನು ಮಕ್ಕಳಂತೆ ಪೋಷಣೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ. ಮಕ್ಕಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳೆಸಿ ಉಳಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಕೂಡ ಅಗತ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಸುಜಯ ಸದಾನಂದ ಹೇಳಿದರು.
ಮಹಿಳಾ ಮಂಡಳಿ ಸದಸ್ಯರಾದ ಮನೋರಾಧಿನಿ ಧರಣೇಂದ್ರ, ಶೋಭಾ ದೇಸಾಯಿ, ಅಮಿತಾ ವಿನಾಯಕ, ಕಲ್ಪನಾ ಅಜಿತ್, ಮೇನಕಾ ಪ್ರಸನ್ನ, ಆಶಾ ಗುರು ಶೇಟ್, ಪ್ರಿಯಾ ಗುರುಪ್ರಸಾದ್, ಮೈನಾ ಉಮೇಶ್, ಜಮೀಳ ರಫೀಕ್, ಮಂಜುಳ ಇತರರು ಈ ಸಂದರ್ಭದಲ್ಲಿ ಇದ್ದರು.