ಕಳಸ ಲೈವ್ ವರದಿ
ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳಸೇಶ್ವರ ನಗರ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಅವಿರತ ಸಂಸ್ಥೆಯು ಉಚಿತ ನೋಟ್ ಪುಸ್ತಕವನ್ನು ವಿತರಣೆ ಮಾಡಿದರು.
ಅವಿರತ ಸಂಸ್ಥೆಯು ಪ್ರತಿವರ್ಷವೂ ಆಯ್ದ 400 ಶಾಲೆಗಳ 40,000 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುತಿದ್ದು, ತಾಲೂಕಿನ ಕೆಲ ಶಾಲೆಗಳ ಜೊತೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳಸೇಶ್ವರ ನಗರ ಶಾಲೆಯ ಮಕ್ಕಳಿಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಅವಿರತ ಟ್ರಸ್ಟ್ ನ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯಾದ ಇಂದಿರಾ ಪ್ರಭು ಅವರೊಂದಿಗೆ ಬಾಲಕೃಷ್ಣ ಪ್ರಭು ಮುಂತಾದವರು ಉಪಸ್ಥಿತರಿದ್ದರು.
Related Stories
September 6, 2024