ಕಳಸ ಲೈವ್ ವರದಿ
ರೈತರು ತಮ್ಮ ಜಮೀನಿನ ಆರ್ಟಿಸಿಗೆ (ಪಹಣಿ ಪತ್ರ) ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಸರಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ತಮ್ಮ ಆರ್ ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕು. ಇದಕ್ಕಾಗಿ ಸರಕಾರ ಹೊಸ ತಂತ್ರಾಂಶವನ್ನು ಸಿದ್ದಪಡಿಸಿದೆ. ಇದನ್ನು ರೈತರು ತಮ್ಮ ಮೊಬೈಲ್ ನಿಂದಲೇ ಮನೆಯಲ್ಲೇ ಕುಳಿತು ಮಾಡಬಹುದು. ಅಥವಾ ತಮ್ಮ ಗ್ರಾಮ ಲೆಕ್ಕಿಗರ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣ ಗೊಳಿಸಬಹುದು. ಆರ್ಟಿಸಿಗೆ ಆಧಾರ್ ಲಿಂಕ್ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರಕಾರದ ಯಾವುದೇ ಸೌಲಭ್ಯ ಗಳು ದೊರಕಲು ತೊಂದರೆ ಉಂಟಾಗಲಿದೆ. ಸರಕಾರ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಹಾಕಬೇಕು.ಆಗ ಬರುವ ಓಟಿಪಿಯನ್ನು ಬಳಸಿ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಬಹುದು. ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕ ಮೊಬೈಲ್ಗೆ ಸಂದೇಶವು ಬರುತ್ತದೆ.
https://Iandrecords.karnataka.gov.in/service4
ಪ್ರಯೋಜನಗಳು
* ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವುದರಿಂದ ಜಮೀನಿನ ದಾಖಲೆಗಳು ಇನ್ನಷ್ಟು ಸುರಕ್ಷಿತ.
*ಭೂ ದಾಖಲೆ ಪಡೆಯುವುದು ಸುಲಭ.
* ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸರಳ.
*ಖಾತೆ ವಿವಾದಗಳನ್ನು ತಪ್ಪಿಸಲು ಅನುಕೂಲ.
*ಸಾಲ ಪ್ರಕ್ರಿಯೆ ಸುಲಭ.
*ಜಮೀನು ಮಾರಾಟ ಸಮಯ ಹೆಚ್ಚಿನ ಪಾರದರ್ಶಕತೆ.
*ಆಂಡ್ರಾಯ್ಡ್ ಮೊಬೈಲ್ ಇಲ್ಲದವರು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಂಪರ್ಕಿಸಬಹುದು.