ಕಳಸ ಲೈವ್ ವರದಿ
ಕಳಸ ಸಮೀಪದ ಕಾರಗದ್ದೆ ಎಂಬಲ್ಲಿ ಬೈಕ್ ಮತ್ತು ಖಾಸಾಗಿ ಬಸ್ಸು ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ಶುಕ್ರವಾರ ನಡೆದಿದೆ.
ಕಳಸದಿಂದ ಮಂಗಳೂರಿಗೆ ಹೋಗುತ್ತಿರುವ ಖಾಸಾಗಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.
ಬೈಕ್ ಸವಾರರು ಚಿಕ್ಕಮಗಳೂರು ಕಡೆಯವರಾಗಿದ್ದು, ಕುದುರೆಮುಖ ಕಡೆ ಜಲಪಾತವನ್ನು ನೋಡಲು ಬಂದಿದ್ದರು ಎನ್ನಲಾಗಿದೆ.
ಗಾಯಾಳುಗಳನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ.
Related Stories
September 6, 2024