ಕಳಸ ಲೈವ್ ವರದಿ
ಕುದುರೆಮುಖ ಸರ್ಕಾರಿ ಪ್ರೌಢಶಾಲೆ, ಕಳಸ ಅಂಬೇಡ್ಕರ್ ವಸತಿ ಶಾಲೆ, ಬಾಳೆಹೊಳೆ ಸರ್ಕಾರಿ ಶಾಲೆ, ಪಟ್ಟಣದ ಖಾಸಗಿ ಶಾಲೆಗಳಾದ ಪ್ರಬೋಧಿನಿ ವಿದ್ಯಾ ಕೇಂದ್ರ, ಜೆಇಎಂ ಶಾಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿವೆ.
ಕುದುರೆಮುಖ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ಮಕ್ಕಳು ಕೂಡ ವಿವಿಧ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು ಮಾನಸ ಕೆ.ಆರ್ 546 ಅಂಕ ಪಡೆದಿದ್ದಾರೆ. ಬಾಳೆಹೊಳೆ ಸರ್ಕಾರಿ ಶಾಲೆಯ ಎಲ್ಲ 5 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ರಕ್ಷಿತಾ 459 ಅಂಕ ಪಡೆದಿದ್ದಾರೆ. ಕಳಸ ಅಂಬೇಡ್ಕರ್ ವಸತಿ ಶಾಲೆಯ ಎಲ್ಲ 34 ಮಕ್ಕಳೂ ತೇರ್ಗಡೆ ಹೊಂದಿದ್ದು, ಕಲ್ಲೇಶ್ (551), ಕಿಶನ್(550) ಮತ್ತು ತೇಜಶ್ರೀ (542) ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಪ್ರಬೋಧಿನಿ ಶಾಲೆಯ ಎಲ್ಲ 45 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 18 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿಂಚನ(611), ಕೆ.ಪಿ ಪ್ರಣೀತಾ (598) ಮತ್ತು ಸಂಜನಾ ವಿ.ಸಿ. (596) ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ಜೆಇಎಂ ಶಾಲೆಯ ಎಲ್ಲ 62 ವಿದ್ಯಾರ್ಥಿಗಳು ಕೂಡ ತೇರ್ಗಡೆ ಆಗಿದ್ದಾರೆ.26 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಪಡೆದಿದ್ದು 34 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಶ್ರಾವಣಿ (611), ಪ್ರಾರ್ಥನಾ ಮಹೇಶ್(605) ಮತ್ತು ಜ್ಯೋತಿಶ್ರೀ (605) ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ಕಳಸ ಕೆಪಿಎಸ್ ಶಾಲೆಯ 102 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು.ಶಾಲೆಯ ಆಂಗ್ಲ ಮಾಧ್ಯಮ ವಿಭಾಗ ಶೇ.100 ಫಲಿತಾಂಶ ಪಡೆದಿದೆ.ಪ್ರತಿಕ್ಷಾ 564 ಅಂಕ ಪಡೆದಿದ್ದಾರೆ.
ಹೊರನಾಡು ಶಾಲೆಯಲ್ಲಿ 14 ವಿದ್ಯಾರ್ಥಿಗಳ ಪೈಕಿ ಓರ್ವ ಅನುತೀರ್ಣನಾಗಿದ್ದು 93% ಫಲಿತಾಂಶ ಬಂದಿದೆ.ಕೌಶಿಕ್ 55 ಅಂಕ ಪಡೆದಿದ್ದಾರೆ.
ಸಂಸೆ ಸರ್ಕಾರಿ ಶಾಲೆಯಲ್ಲಿ 95.45% ಫಲಿತಾಂಶ ಬಂದಿದೆ 22 ವಿದ್ಯಾಥಿಘಳ ಪೈಕಿ ಓರ್ವ ಅನುತೀರ್ಣನಾಗಿದ್ದು ನಯನ 534 ಅಂಕ ಪಡೆದಿದ್ದಾರೆ.
ಹಿರೇಬೈಲು ಸರ್ಕಾರಿ ಶಾಲೆಯಲ್ಲಿ 94% ಫಲಿತಾಂಶ ಬಂದಿದೆ 17 ವಿದ್ಯಾರ್ಥಿಗಳ ಪೈಕಿ ಓರ್ವ ಅನುತೀರ್ಣನಾಗಿದ್ದು, ಅನ್ವಿತಾ 526 ಅಂಕ ಪಡೆದಿದ್ದಾರೆ.