ಕಳಸ ಲೈವ್ ವರದಿ
ಶುಕ್ರವಾರ ನಡೆದ ಲೋಕಸಭಾ ಚನಾವಣೆಯಲ್ಲಿ ಕಳಸ ತಾಲ್ಲೂಕಿನಾಧ್ಯಂತ ಶೇ 76% ಮತದಾನ ಶಾಂತಿಯುತವಾಗಿ ನಡೆದಿದೆ.
ತಾಲ್ಲೂಕಿನಾದ್ಯಂತ ಕಳಸ,ಸಂಸೆ,ಇಡಕಿಣಿ,ಮರಸಣಿಗೆ,ತೋಟದೂರು,ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 33 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಒಟ್ಟು ತಾಲೂಕಿನಲ್ಲಿ 25138 ಮತದಾರರಿದ್ದು, 19088 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೊದಲನೆ ಭಾರಿ ಮತ ಚಲಾಯಿಸುವ ಯುವ ಮತದಾರರು ಬಹಳ ಉತ್ಸಾಹದಿಂದ ಮತ ಚಲಾಯಿಸಿ ಸಂತಸಪಟ್ಟರು.ಸುಡುವ ಬಿಸಿಲಿನ ಮಧ್ಯೆಯೂ ಕೆಲವೆಡೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ಬೆಳಿಗ್ಗೆ 11 ಗಂಟೆಯ ವರೆಗೆ ಅತೀ ಹೆಚ್ಚು ಮತದಾನವಾಗಿ ಮಧ್ಯಾಹ್ನದ ವರೆಗೆ ಶೇ 50% ಮತದಾನವಾಗಿದ್ದು, ಮದ್ಯಾಹ್ನದ ನಂತರ ಮತದಾನಕ್ಕೆ ನೀರಸ ಪ್ರತಿಕ್ರೀಯೆ ಕಂಡು ಬಂತು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತದಾರರು ಹೆಚ್ಚಿನ ಮತದಾನ ಮಾಡಿದರು…ಬಹುತೇಕ ಮತ ಕೇಂದ್ರದಲ್ಲಿ ಹೆಚ್ಚಾಗಿ ಹಿರಿಯ ಮತದಾರರು ಅತೀ ಉತ್ಸಾಹದಿಂದ ಮತದಾನ ಮಾಡಿದ್ದು ಕಂಡು ಬಂತು. ಕೆಲ ವೃದ್ಧ ಮತದಾರರನ್ನು ಚುನಾವಣಾಧಿಕಾರಿಗಳು ಮತ ಕೇಂದ್ರಕ್ಕೆ ಕೈಹಿಡಿದುಕೊಂಡು ಬರುತ್ತಿರುವುದು ಕಂಡು ಬಂತು.
ನಕ್ಸಲ್ ಪೀಡಿತ ಪ್ರದೇಶ ವಾದ ಕಳಕೋಡು,ಬಲಿಗೆ,ಎಸ್.ಕೆ.ಮೇಗಲ್ ಕೆಳಬಾಗ,ಸಂಸೆ ಮತ ಕೇಂದ್ರದಲ್ಲಿ ಅರೆಸೇನಾ ಪಡೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು.
Related Stories
September 6, 2024