ಕಳಸ ಲೈವ್ ವರದಿ
ತಾಲೂಕಿನ ಕೆ.ಕೆಳಗೂರು ಕಾರಕ್ಕಿ-ಹೊಸಗದ್ದೆಯ ಶ್ರೀ ಭದ್ರಾ ಮಹಾಗಣಪತಿ ದೇವಸ್ಥಾನದಲ್ಲಿ ವರ್ಧಂತಿ ಮಹೋತ್ಸವ ಬುಧವಾರ ನಡೆಯಿತು.
ಬುಧವಾರ ಬೆಳಿಗ್ಗೆ ಗುರುಪ್ರಾರ್ಥನೆ, ಗಣಪತಿಪೂಜೆ, ಕಲಾತತ್ವಾದಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಮಂಗಳಾರತಿಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು.
ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿ ನೇತೃತ್ವದ ತಂಡದೊಂದಿಗೆ ಪೂಜಾ ವಿಧಿ ವಿಧಾನಗಳು ಜರುಗಿದ್ದು, ಊರ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಎಪ್ರಿಲ್ 30ರ ಮಂಗಳವಾರ ಸಂಜೆ 5:00 ಗಂಟೆಗೆ ಸುಗ್ಗಿ ಹಬ್ಬ ನಡೆಯಲಿದ್ದು, ಮೇ1ರ ಬುಧವಾರ 9:00ಗೆ ಕೆಂಡಸೇವೆ ನಡೆಯಲಿದೆ.