ಕಳಸ ಲೈವ್ ವರದಿ
ದ್ವಿತೀಯು ಪಿಯುಸಿ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಕಳಸ ಕೆಳಂಗಡಿ ಎ. ಅನನ್ಯಾ ಜೈನ್ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಅನನ್ಯಾ ಜೈನ್ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಅವರು ವಾಣಿಜ್ಯ ವಿಭಾಗದಲ್ಲಿ 589 ಅಂಕ ಗಳಿಸಿದ್ದಾರೆ.ಎಕೋನಾಮಿಕ್ಸ್ ಮತ್ತು ಅಕೌಂಟೆನ್ಸಿಯಲ್ಲಿ ಪೂರ್ಣ 100 ಅಂಕ ಗಳಿಸಿದ ಅವರು ಕಾಮರ್ಸ್ ಮತ್ತು ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ತಲಾ 98 ಅಂಕ ಗಳಿಸಿದ್ದಾರೆ.
ಜೆಇಎಂ ಶಾಲೆಯ ಹಳೆ ವಿದ್ಯಾರ್ಥಿನಿ ಆಗಿದ್ದ ಅನನ್ಯಾ ಆಗ 10ನೇ ತರಗತಿಯಲ್ಲಿ ಶೇ 97% ಅಂಕ ತೆಗೆದು ಮೆಚ್ಚುಗೆಗೆ ಪಾತ್ರರಾಗಿದ್ದರು.
ಇವರು ಕಳಸ ಚಂದ್ರನಾಥ ಬಸದಿ ಅರ್ಚಕರಾದ ಅಜಿತ್ ಪ್ರಸಾದ್ ಮತ್ತು ಕಲ್ಪನಾ ದಂಪತಿ ಪುತ್ರಿಯಾಗಿದ್ದು, ಅನನ್ಯಾರ ಈ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Related Stories
September 6, 2024