ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿಸಿದ್ದು ಶೇ.93.63 ಫಲಿತಾಂಶ ಪಡೆದಿದೆ.
ಪರೀಕ್ಷೆ ಬರೆದಿದ್ದ 110 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ 52 ವಿದ್ಯಾರ್ಥಿಗಳ ಪೈಕಿ 48( ಶೇ92.3) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ 47 ವಿದ್ಯಾರ್ಥಿಗಳ ಪೈಕಿ 46 (ಶೇ 97.87) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ 12 ವಿದ್ಯಾರ್ಥಿಗಳ ಪೈಕಿ 10 (ಶೇ83.33) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಮತ್ತು 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 34 ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿ, 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 566 ಅಂಕ (ಶೇ.94.33) ಗಳಿಸಿದ ಸ್ವಾತಿ ಬಿ.ಆರ್ ಕಾಲೇಜಿಗೆ ಅಗ್ರಸ್ಥಾನದ ಶ್ರೇಯ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವರ್ಷಿತ ವಿ ಶೆಟ್ಟಿ 563, ದರ್ಶನ್ 548, ವಿಜ್ಞಾನ ವಿಭಾಗದ ನೀಕ್ಷಿತಾ ಶೆಟ್ಟಿ 543, ಕಲಾ ವಿಭಾಗದ ರಂಜಿತಾ ಬಿ.ಆರ್ 542, ಮೇಘನಾ 521, ಸುನೀತ ಡಿ.ಪಿ 511 ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಎಂದು ಕಾಲೇಜಿನ ಪ್ರಾಂಶುಪಾಲ ಅನಂತಪದ್ಮನಾಭ ಮಾಹಿತಿ ನೀಡಿದ್ದಾರೆ.
ಈ ಭಾರಿ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ.ಇದಕ್ಕಾಗಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಪ್ರಾಂಶುಪಾಲರು, ಉಪನ್ಯಾಸಕರು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.