ಕಳಸ ಲೈವ್ ವರದಿ
ಇಂದು ತಾಲ್ಲೂಕಿನಾಧ್ಯಂತ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಮನೆ ಮಂದಿಯೆಲ್ಲ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಪೂಜೆ ಮಾಡಿ ಹೊಸ ಸಂವತ್ಸರವನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.
ಹಿಂದೂ ಧರ್ಮದ ಪ್ರಕಾರ ಇವತ್ತಿನಿಂದ ಹೊಸ ವರ್ಷ ಆರಂಭವಾಗುತ್ತದೆ. ಬಹುತೇಕ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಕಂಡು ಬಂತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.
ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬಂತೆ ಮೂರು ತಲೆಮಾರಿನ ಜನರೆಲ್ಲಾ ಹಬ್ಬದಲ್ಲಿ ಒಂದೆಡೆ ಸೇರಿದರು. ಕಷ್ಟ-ಸುಖ ಎರಡರಲ್ಲೂ ಒಂದಾಗಿ ಇರುತ್ತೇವೆ ಎಂದು ಬೇವು-ಬೆಲ್ಲ ತಿಂದು ಇಂದು ಶುಭಾಶಯ ವಿನಿಮಯಗೊಳಿಸಿಕೊಂಡರು.
ಈ ಸಡಗರಕ್ಕೆ ಒಬ್ಬಟ್ಟಿನ ಗಮ್ಮತ್ತು ಸಹ ಇತ್ತು. ಪುಟಾಣಿಗಳ ಹೊಸ ಉಡುಗೆಗಳ ಹೊಂಬಣ್ಣ, ಹೆಂಗಳೆಯರ ರೇಷ್ಮೆ ಸೀರೆ, ಗಾಜಿನ ಬಳೆಗಳು ನವೋಲ್ಲಾಸ ಮೂಡಿಸಿದವು. ಹೊಸ ಬಟ್ಟೆ ಧರಿಸಿ ವಿವಿಧ ಬಗೆಯ ಅಡುಗೆ ತಯಾರಿಸಿ ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ನವ ಸಂವತ್ಸರಕ್ಕೆ ನಾಂದಿ ಹಾಡಿದರು.
Related Stories
September 6, 2024