ಕಳಸ ಲೈವ್ ವರದಿ
ಪ್ರಬೋಧಿನಿ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಶಕ್ತಿಗಣಪತಿ ಸೇವಾ ಪ್ರತಿಷ್ಠಾನದ ವತಿಯಿಂದ ಎಪ್ರಿಲ್ 1 ರಿಂದ ಎಪ್ರಿಲ್ 4 ರವರೆಗೆ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ 5 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತೀ ದಿನ ಬೆಳಿಗ್ಗೆ 9-30 ರಿಂದ ಅಪರಾಹ್ನ 12-45ರ ವರಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಕಥೆಗಳು, ಆಟಗಳು, ಕರ ಕೌಶಲ್ಯಗಳು, ಪಿಕ್ನಿಕ್, ಸುಗಮ ಸಂಗೀತ, ರಂಗೋಲಿ, ಕರಾಟೆ, ರಸಪ್ರಶ್ನೆ, ಚಿತ್ರಕಲೆಯ ಬಗ್ಗೆ ಶಿಬಿರ ನಡೆಯಲಿದೆ.
ಪ್ರತೀ ವಿದ್ಯಾರ್ಥಿಗೆ 50 ರೂ ಶಿಬಿರ ಶುಲ್ಕ ನಿಗದಿ ಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 8277135593, 8073047097 ಈ ನಂ ಸಂಪರ್ಕಿಸಬಹುದಾಗಿದೆ.
Related Stories
September 6, 2024