ಕಳಸ ಲೈವ್ ವರದಿ
ತಾಲ್ಲೂಕಿನ ಗಂಗನಕುಡಿಗೆ ಕುಂಬಳಡಿಕೆ ಸ್ವಾಮಿ ಕೊರಗಜ್ಜ ವರ್ಷಾವಧಿ ನೇಮೋತ್ಸವ ಮಾ 16ರಂದು ನಡೆಯಲಿದೆ.
ಅಂದು ಕುಂಬಳಡಿಕೆ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಥಮ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ನಾರಾವಿ ಕೃಷ್ಣ ತಂತ್ರಿಯವರ ಅಮೃತ ಹಸ್ತದಿಂದ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವಗಳಿಗೆ ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಗುಳಿಗ ದೈವದ ಕೋಲ ಹಾಗೂ ರಾತ್ರಿ 10ರಿಂದ ಸ್ವಾಮಿ ಕೊರಗಜ್ಜ ದೈವ ನರ್ತನ ಸೇವೆ ದೊಂದಿ ಬೆಳಕಿನೊಂದಿಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಸಂಜೀವ ತಿಳಿಸಿದ್ದಾರೆ.
Related Stories
September 6, 2024