ಕಳಸ ಲೈವ್ ವರದಿ
ಕಳಸದ ಮ್ಯಾಟ್ರಿಕ್ಸ್ ಅಬಾಕಸ್ ವಿದ್ಯಾರ್ಥಿಗಳು
ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಮಾಡಿರುತ್ತಾರೆ. ಆಶಲ್ ತೌರು 4th level ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ proudgy ವಿಭಾಗದಲ್ಲಿ ದೀಕ್ಷಿತಾ ಚಿನ್ನದ ಪದಕ ಪಡೆದಿರುತ್ತಾಳೆ. ಅಲೋಕ್ ಶಾಸ್ತ್ರಿ, ಸನ್ನಿಧಿ ಹಾಗೂ ವಿವನ್ ಬೆಳ್ಳಿ ಪದಕ ಪಡೆದಿರುತ್ತಾರೆ. ಉಳಿದಂತೆ 9 ವಿದ್ಯಾರ್ಥಿಗಳು ಕಂಚಿನ ಪದಕ ಪಡೆದಿರುತ್ತಾರೆ.
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯಾ ಸದಾನಂದ ಬಹುಮಾನ ವಿತರಿಸಿದರು.
ಆನಂದ್ ಗುರೂಜಿ ಸ್ವಾಗತ ಮಾಡಿದರೆ, ಭಾರತಿ ಆನಂದ್ ಕಾರ್ಯಕ್ರಮದ ನಿರೂಪಣೆ ಮಾಡಿದರು.