ಕಳಸ ಲೈವ್ ವರದಿ
ಹದೆಗೆಟ್ಟ ರಸ್ತೆಗೆ ಗ್ರಾಮ ಪಂಚಾಯಿತಿಯ ಅನುದಾನದ ಜೊತೆಗೆ ಗ್ರಾಮಸ್ಥರು ಚಂದಾ ನೀಡಿ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಯ್ಯನ ಮನೆ, ತಾರಿಕೊಂಡ, ಕಡೇಮನೆ, ಲಲಿತಾದ್ರಿ, ಕುಮಾರ್ಪಾಲ್, ಬೆಟಿಗೇರಿ ಗ್ರಾಮದ ಸಂಪರ್ಕ ರಸ್ತೆಯನ್ನು ಭಾನುವಾರ ದುರಸ್ಥಿ ಮಾಡಿದರು.
ಈ ಗ್ರಾಮಗಳಲ್ಲಿ 22 ಮನೆಗಳಿವೆ. ಕಳೆದ ಹಲವು ವರ್ಷಗಳಿಂದ ದುರಸ್ಥಿ ಕಾಣದ ಇರುವ ಮೂರು ಕಿ.ಮೀ ದೂರದ ಗುಂಡಿಮಯ ರಸ್ತೆಯಲ್ಲಿ ಓಡಾಡೋದೆ ಸಹಾಸದ ಕೆಲಸವಾಗಿತ್ತು. ವಾಹನಗಳು ಓಡಾಡಲು ಸಾದ್ಯವಾಗದೆ ಇರೋದ್ರಿಂದ ಈ ಭಾಗದಿಂದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಸಮಸ್ಯೆಯನ್ನು ಮನಗಂಡ ಆ ಭಾಗದ ಗ್ರಾಮ.ಪಂ ಸದಸ್ಯ ಸುಂದರ ಶೆಟ್ಟಿ ಪಂಚಾಯಿತಿ ಅನುದಾನದಿಂದ 25 ಸಾವಿರ ರೂ ರಸ್ತೆ ರಿಪೇರಿಗಾಗಿ ಇರಿಸಿದ್ದರು. ಆದರೆ ಈ ಅನುದಾನದಿಂದ ರಸ್ತೆ ರಿಪೇರಿ ಸಾಧ್ಯ ವಿಲ್ಲದೆ ಇದ್ದ ಕಾರಣ ಆ ಭಾಗದ 22 ಮನೆಯವರೂ ಸೇರಿ ಚಂದಾ ನೀಡಿ ಹೊಂಡಮಯವಾಗಿದ್ದ ರಸ್ತೆಯ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಸುಂದರ ಶೆಟ್ಟಿ ಮಾತನಾಡಿ ಈ ಹಿಂದಿನ ಶಾಸಕರು ಈ ರಸ್ತೆಯÉ ಕಾಂಕ್ರೇಟಿಕರಣಕ್ಕಾಗಿ 75 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದರು.ಆದರೆ ನಂತರ ಚುನಾಯಿತರಾಗಿ ಬಂದ ಶಾಸಕರು ಆ ಅನುದಾನವನ್ನು ರದ್ದು ಮಾಡಿದ ಪರಿಣಾಮ ರಸ್ತೆಯ ಕಾಮಗಾರಿ ನಡೆದಿಲ್ಲ.ಈಗ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳಸ ಗ್ರಾಮ ಪಂಚಾಯಿತಿ ಪಂಚಾಯಿತಿಯಿಂದ 25 ಸಾವಿರ ಅನುದಾನ ನೀಡಿದ್ದಾರೆ ಇದರ ಜೊತೆ ಗ್ರಾಮಸ್ಥರು ಚಂದಾ ನೀಡಿ, ಶ್ರಮದಾನದ ಮುಖಾಂತರ ರಸ್ತೆಯ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುಧೀರ, ಲಕ್ಷ್ಮೀನಾರಾಯಣ, ಜನಾರ್ಧನ ಭಟ್, ಆದರ್ಶ, ಶಿವಕುಮಾರ್, ಭಾಸ್ಕರ, ರಂಜನ್, ಅರುಣ, ಅರುಂದತಿ, ಪ್ರಭಾಕರ್, ಅದಿತ್ಯಮೂರ್ತಿ ಇತರರು ಇದ್ದರು.