ಕಳಸ ಲೈವ್ ವರದಿ
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಳಸ ತಾಲೂಕಿನ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಗೆ ಕಳಸ ಜೆಸಿಐ ಸಂಸ್ಥೆಯು ಆನ್ ಲೈನ್ ಭಾಷಣ ಸ್ಪರ್ಧೆಯನ್ನು ಏರ್ಷಡಿಸಿದೆ.
ಸಮೃದ್ಧ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಎಂಬ ವಿಷಯದ ಬಗ್ಗೆ ಮೂರು ನಿಮಿಷದ ಭಾಷಣವನ್ನು ವಿಡಿಯೋ ಮಾಡಿ ಕಳುಹಿಸಬೇಕು.
ಭಾಷಣವು ಕಿರಿಯರ ವಿಭಾಗ(8ರಿಂದ 10ನೇ ತರಗತಿ) ಹಿರಿಯರ ವಿಭಾಗ(11 ಮತ್ತು 12ನೇ ತರಗತಿ) ಎರಡು ವಿಭಾಗಗಳನ್ನು ಮಾಡಲಾಗಿದ್ದು, ಭಾಷಣದ ವಿಡಿಯೋವನ್ನು 12-01-2024ರ ಸಂಜೆ 5 ಗಂಟೆಯ ಒಳಗಾಗಿ 9483711316 ಅಥವಾ 9480363932 ಈ ನಂ ಗೆ ವ್ಯಾಟ್ಸಾಪ್ ಮಾಡಬೇಕು.ಜೊತೆಗೆ ಸ್ಪರ್ಧಾಳುವಿನ ಆದಾರ್ ಕಾರ್ಡ್ ಪ್ರತಿಯನ್ನು ಕಳುಹಿಸುವುದು.
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು ಅಲ್ಲದೆ ಜೆಸಿಐ ಭಾರತ ನಡೆಸುವ ಪರಿಣಾಮಕಾರಿ ಭಾಷಣ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಪ್ರವೇಶವನ್ನು ನೀಡಲಾಗುವುದು ಎಂದು ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9483711316 ಅಥವಾ 9480363932 ನಂ ಸಂಪರ್ಕಿಸಿ