ಕಳಸ ಲೈವ್ ವರದಿ
ಇಲ್ಲಿಯ ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ದೇವರ ರಥೋತ್ಸವ ಜನವರಿ 15 ರಂದು ನಡೆಯಲಿದೆ.
ಜನವರಿ 14ರಂದು ಶ್ರೀ ಗಣಪತಿಹೋಮ, ದ್ವಜಾರೋಹಣ ಮತ್ತು ರಾತ್ರಿ ದಿಂಡಿ ಉತ್ಸವ ನಡೆಯಲಿದ್ದು, ಜನವರಿ 15 ರಂದು ಮಧ್ಯಾಹ್ನ ಶ್ರೀಮನ್ಮಹಾರಥಾರೋಹಣ ರಾತ್ರಿ ಶ್ರೀಮನ್ಮಹಾರಥೋತ್ಸವ ನಡೆಯಲಿದೆ.
ಜನವರಿ 16ರಂದು ಕುಂಕುಮೋತ್ಸವ, ಪಲ್ಲಕಿ ಉತ್ಸವ, ಸಂಧಾನ ಮತ್ತು ಅವಭೃತ ಸ್ನಾನ ನಡೆದು ಜನವರಿ 17ರಂದು ನಡೆಯುವ ಶುದ್ಧ, ಸಂಪ್ರೋಕ್ಷಣೆಯೊಂದಿಗೆ ಜಾತ್ರ ಮಹೋತ್ಸವಕ್ಕೆ ತೆರೆಬೀಳಲಿದೆ.
ವಿಶೇಷವಾಗಿ ಜನವರಿ 15 ರಂದು ಸಂಜೆ 6 ಗಂಟೆÀಯಿಂದ 7 ಗಂಟೆ ವರೆಗೆ ಶ್ರೀ ಚನ್ನಕೇಶವ ಭಕ್ತ ವೃಂದ ಬಾಳೆಹೊಳೆ ಮಹಿಳಾ ಸದಸ್ಯರಿಂದ ಭಜನೆ, ಮತ್ತು ರಾತ್ರಿ 7 ರಿಂದ 10ರ ವರೆಗೆ ಹೊಳ್ಳಾಸ್ ಶ್ರೀ ಚನ್ನಕೇಶವ ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಬಾಳೆಹೊಳೆ ಇವರಿಂದ ಭೀಷ್ಮಪ್ರತಿಜ್ಞೆ ಯಕ್ಷಗಾನ ಕಾರ್ಯಕ್ರಮ ಇರುತ್ತದೆ.