ಕಳಸ ಲೈವ್ ವರದಿ
ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ 45 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ ನಾಲ್ಕರಂದು ನಡೆಯಲಿದೆ.
ಜನವರಿ ನಾಲ್ಕರಂದು ಅಭಿಷೇಕ ಹಾಗೂ ವಿಶೇಷ ಪೂಜೆ ಮಹಾಮಂಗಳಾರತಿ, ದೇವಾಲಯದ ಆವರಣಕ್ಕೆ ಗ್ರಾನೈಟ್ ಕಲ್ಲು ನೆಲಹಾಸಿನ ಅಳವಡಿಕೆ ಹಾಗೂ ದೇವಾಲಯಕ್ಕೆ ಹಿತ್ತಾಳೆ ಕವಚ ಅಳವಡಿಸಿದ ದಾನಿಗಳಿಗೆ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ.
ಸಂಜೆ 5 ಗಂಟೆಗೆ ಪ್ರಸಿದ್ಧ ಕೇರಳದ ಕಲಾವಿದರಿಂದ ಪಂಚವಾದ್ಯ ಚೆಂಡೆಮೇಳದೊಂದಿಗೆ ಶ್ರೀ ಸ್ವಾಮಿಯ ವೈಭವಯುತ ಪಾಲುಕೊಂಬು ಮೆರವಣಿಗೆಯು ಶ್ರೀ ಕಲಶೇಶ್ವರ ಸ್ವಾಮಿ ಕ್ಷೇತ್ರದಿಂದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಾಗಿ ಮಹಾವೀರ ರಸ್ತೆಯಲ್ಲಿ ಹಿಂದಿರುಗುವುದು.
ನಂತರ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮತ್ತು ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
Related Stories
September 6, 2024