ಕಳಸ ಲೈವ್ ವರದಿ
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ತಲಗೋಡು ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ಕಳಸ ಪೊಲೀಸರು ದಾಳಿ ನಡೆಸಿ ಜೂಜಾಟ ಆಡುತ್ತಿದ್ದ 9 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರದ ರಾತ್ರಿ ತಲಗೋಡು-ಕೆಂಪನಮಕ್ಕಿ ಕಡೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದಾರೆ ಎಂದು ಕಳಸ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 9 ಜನ ಆರೋಪಿಗಳನ್ನು ಬಂಧಿಸಿ ಅವರಿಂದ ಆಡಲು ಬಳಸಿದ್ದ ಪ್ಲಾಸ್ಟಿಕ್ ಟಾರ್ಪಲ್, 52 ಇಸ್ಪೀಟ್ ಎಲೆಗಳು ಸೇರಿ ಒಟ್ಟು 87,350/- ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಕಳಸ ಠಾಣೆಯ ಪಿಎಸ್ಐ ಶ್ರೀ ನಿತ್ಯಾನಂದ ಗೌಡ ಪಿ.ಡಿ, ಸಿಬ್ಬಂದಿಗಳಾದ ನಾಗರಾಜ್ ವೈ, ಮಂಜುನಾಥ ಮುದ್ದೇರ ಇದ್ದರು.