ಕಳಸ ಲೈವ್ ವರದಿ
ದೀಪಾವಳಿ ಹಬ್ಬ ಹಾಗೂ ಅಭ್ಯಂಗ ಸ್ನಾನದ ಮಹತ್ವ*
ಆಯುರ್ವೇದವು ಜೀವನ ಶಾಸ್ತ್ರವಾಗಿದ್ದು ಬೇರೆ ವೈದ್ಯಕೀಯ ಪದ್ಧತಿಯಂತೆ ಕೇವಲ ರೋಗ ಶಮನವನ್ನು ಮಾತ್ರ ಪರಿಗಣಿಸದೆ ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ರೋಗ ಬರದಂತೆ ತಡೆಯುವ ವಿಧಾನವನ್ನು ತಿಳಿಸಿದೆ. ಹೀಗೆ ತಿಳಿಸಿದ ವಿವರಣೆಗಳಲ್ಲಿ ದಿನಚರ್ಯ ಅಧ್ಯಾಯವು ಒಂದು ಅಂದರೆ ನಾವು ಬೆಳಿಗ್ಗೆ ಎದ್ದ ನಂತರ ಪಾಲಿಸಬೇಕಾದ ಪ್ರತಿಯೊಂದು ವಿಷಯದ ವಿವರಣೆ ನೀಡುವ ಅಧ್ಯಾಯ.
ಇದರಲ್ಲಿ ಅಭ್ಯಂಗದ ಮಹತ್ವವನ್ನು ಬಹಳ ವಿವರವಾಗಿ ಉಲ್ಲೇಖಿಸಿದೆ.
*ಅಭ್ಯಂಗಮ್ ಆಚರೆತ್ ನಿತ್ಯಂ ಸ ಜರಾ ಶ್ರಮ ವಾತಃ*|
*ದೃಷ್ಟಿ ಪ್ರಸಾದ ಪುಷ್ಟಿಆಯು ಸ್ವಪ್ನ ಸುತ್ವಕ್ ಧಾರ್ಡ್ಯಕೃತ್*||
*ಶಿರ ಶ್ರವಣ ಪಾದೇಶು ತo ವಿಶೇಷೆಣ ಶೀಲಯೆತ್* l *ಅಷ್ಟಾಂಗ ಹೃದಯ ಸೂತ್ರ 2/8*
ಶ್ಲೋಕದ ಅರ್ಥ:- ಅಭ್ಯಂಗವನ್ನು ಯಾರು ನಿತ್ಯ ಅನುಸರಿಸುತ್ತಾರೊ ಅವರು ಮುಪ್ಪು ಆಯಾಸ ಮತ್ತು ವಾತದಿಂದ ಉಂಟಾಗುವ ಸಮಸ್ಯೆಯಿಂದ ಬಳಲುವುದಿಲ್ಲ
ಉತ್ತಮ ದೃಷ್ಟಿ ಒಳ್ಳೆಯ ನಿದ್ದೆ ಕಾಂತಿಯುಕ್ತ ಚರ್ಮ ಹಾಗೂ ದೀರ್ಘ ಆಯಸ್ಸು ಪಡೆಯಲು ಸಹಕಾರಿ ಅದರಲ್ಲೂ ವಿಶೇಷವಾಗಿ ತಲೆ ಪಾದ ಮತ್ತು ಕಿವಿಯ ಹೊರ ಭಾಗ ಕಿವಿ ಸೋರುವ ಸಮಸ್ಯೆ ಇಲ್ಲದವರು ಕಿವಿಯ ಒಳಗೂ ಕೂಡ ಒಂದೆರಡು ಹನಿ ಎಣ್ಣೆ ಬಳಸುವುದು ಉತ್ತಮ.
*ದೀಪಾವಳಿಯಂದು ಅಭ್ಯಂಗ ಸ್ನಾನದ ಮಹತ್ವ:-*
ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ
ಇದು ಮುoಬರುವ ಹೇಮಂತ ಹಾಗೂ ಶಿಶಿರ ಋತುವಿಗೆ ದೇಹವನ್ನು ಸದೃಢಗೊಳಿಸಲು ಸ್ನೇಹಯುಕ್ತ ಆಹಾರ ಮತ್ತು ಅಭ್ಯಾಸವನ್ನು ವಿಶೇಷವಾಗಿ ಅನುಸರಿಸಬೇಕೆಂದು ತಿಳಿಸಿದೆ
ಅಂದರೆ ಚಳಿಗಾಲದಲ್ಲಿ ವಾತ ಪ್ರಕೋಪದಿಂದ ಉಂಟಾಗುವ ಗಂತುನೋವು, ಸ್ನಾಯುಸೆಳೆತ ಹಾಗೂ ಚರ್ಮ ಸುಕ್ಕುಗಟ್ಟುವಿಕೆ
ಇವುಗಳನ್ನು ತಡೆಯಲು ನಮ್ಮ ಪೂರ್ವಜರು ಅಭ್ಯಂಗವನ್ನು ವರ್ಷಪೂರ್ತಿ ಅನುಸರಿಸದಿದ್ದರೂ ಹೇಮಂತ ಶಿಶಿರ ಋತುವಿನಲ್ಲಿ ಅನುಸರಿಸಬೇಕೆಂದು ದೀಪಾವಳಿ ಸಂದರ್ಭದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ.
ಇಷ್ಟೆಲ್ಲಾ ಪ್ರಯೋಜನ ನೀಡುವ ಅಭ್ಯಂಗ ಇಂದಿನ ಯಾಂತ್ರಿಕ ಜೀವನಶೈಲಿಯಿಂದ ಕಡೆಗಣಿಸಲ್ಪಟ್ಟು ಜನರು ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುವoತಾಗಿದೆ.
ಚರ್ಮದ ಕಾಂತಿ ಕಾಪಾಡಲು ಮುಪ್ಪು ಮುಂದೂಡಲು ಸಹಕಾರಿಯಾದ ಅಭ್ಯಂಗ ಮತ್ತು ಸ್ವೇದ ಚಿಕಿತ್ಸೆ ನವೆಂಬರ್ 9 ರಿಂದ 16 ವರೆಗೆ ಲಭ್ಯವಿದೆ ಆರೋಗ್ಯಾಸಕ್ತರು ಮುಂಗಡವಾಗಿ ನೊಂದಾಯಿಸಿ ಚಿಕಿತ್ಸೆ ಪಡೆಯಬಹುದಾಗಿದೆ.
ಅಭ್ಯಂಗ ತೈಲವು ಲಭ್ಯವಿದೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
*ಡಾ ಮಂಜುನಾಥ ಪ್ರಭು ಪುನರ್ವಸು ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸಾ ಕೇಂದ್ರ, ಮಾರ್ಕೆಟ್ ರಸ್ತೆ. ಕಳಸ*
9483983327
6363827038
Related Stories
September 18, 2024
September 6, 2024