ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯಿಂದ ನಡೆಯುವ 35ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ಶ್ರೀ ಕಲಶೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ಹಾಗೂ ಗಿರಿಜಾಂಬಾ ದೇವಸ್ಥಾದಲ್ಲಿ ಸಾನಿಧ್ಯ ಕಲಶಾಭಿಷೇಕ, ಸಪ್ತಶತೀ ಪಾರಾಯಣ, ಗಣಹೋಮ ನೆರವೇರಿದ ಬಳಿಕ ದುರ್ಗಾಮಂಟಪದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಹಂಸವಾಹಿನಿ ಶೈಲಪುತ್ರಿ ಪೂಜೆ, ಸಪ್ತಶತೀ ಪಾರಾಯಣ, ಮಹಾಮಂಗಳಾರಿ, ಅನ್ನದಾನ ಸೇವೆಯು ನಡೆಯಿತು.
ಸಂಜೆ ಒಕ್ಕಲಿಗರ ಸಮುದಾಯದವರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು.ಒಕ್ಕಲಿಗ ಸಮುದಾಯದ ನೂರಾರು ಬಾಂಧವರು ಕಳಸ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಅಕ್ಕಿ, ದವಸ ದಾನ್ಯ, ತರಕಾರಿ ಇನ್ನಿತರೆ ವಸ್ತುಗಳನ್ನು ಕಳಸ ರಥ ಬೀದಿಯಲ್ಲಿ ಹೊತ್ತುಕೊಂಡು ಬಂದು ನಂತರ ದುರ್ಗಾ ಮಂಟಪಕ್ಕೆ ಬಂದು ಅಲ್ಲಿ ದುರ್ಗಾದೇವಿಗೆ ಸಮರ್ಪಿಸಲಾಯಿತು.