ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯ ವತಿಯಿಂದ 35ನೇ ವರ್ಷದ ಶ್ರೀ ದುರ್ಗಾ ಪೂಜಾ ಮಹೋತ್ಸವವು ಅಕ್ಟೋಬರ್ 15 ಭಾನುವಾರದಿಂದ ಅಕ್ಟೋಬರ್ 24 ಮಂಗಳವಾರದವರೆಗೆ ಕಳಸ ಶ್ರೀ ದುರ್ಗಾಮಂಟಪದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಟಿ.ರುದ್ರಯ್ಯ ಆಚಾರ್ಯ ತಿಳಿಸಿದ್ದಾರೆ.
ಅಕ್ಟೋಬರ್ 15 ಭಾನುವಾರ ಕ್ಷೇತ್ರಾಧಿಪತಿ, ಶ್ರೀಕಲಶೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ಹಾಗೂ ಶ್ರೀ ಗಿರಿಜಾಂಬ ದೇವಸ್ಥಾನದಲ್ಲಿ ಸಾನಿಧ್ಯ ಕಲಾಶಾಭಿಷೆಕ ಸಪ್ತಶತೀ ಪಾರಾಯಣ ಬೆಳಿಗ್ಗೆ 10ಗಂಟೆಗೆ ಗಣಹೋಮ ನಂತರ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ. ಸಂಜೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಟ್ವಿಕ್ಲಿಂಗ್ ಸ್ಟಾರ್ಸ್ ದ ಸ್ಕೂಲ್ ಆಫ್ ಡ್ಯಾನ್ಸ್ ಕಳಸ ಇವರಿಂದ “ಡ್ಯಾನ್ಸ್ ಡ್ಯಾನ್ಸ್” ಕಾರ್ಯಕ್ರಮ.
ಅಕ್ಟೋಬರ್ 16 ಸೋಮವಾರದಂದು ಧಾರ್ಮಿಕ ಪೂಜಾ ಕಾರ್ಯಕ್ರಮದ ಅಂಗವಾಗಿ ಗಜವಾಹಿನಿ, ಬ್ರಹ್ಮಚಾರಿಣಿ, ಪೂಜಾ ಪಾರಾಯಣ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ವರನಾದ ಮ್ಯೂಸಿಕಲ್ ಅರ್ಪಿಸುವ “ಸ್ವರನಾದ ಸಂಗೀತ ” ಕಾರ್ಯಕ್ರಮ.
ಅಕ್ಟೋಬರ್ 17 ಮಂಗಳವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಿಂಹ ವಾಹಿನಿ, ಚಂದ್ರಘಟಾ ಪೂಜಾ ಪಾರಾಯಣ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಂಚಶೀ ಕಲಾವಿದರು ಚಾರ್ಮಾಡಿ ಇವರಿಂದ ಸಾಮಾಜಿಕ ತುಳು ನಾಟಕ “ಈ ಪೊರ್ಲು ತೂವೋಡ್ಚಿ.”
ಅಕ್ಟೋಬರ್ 18 ಬುಧವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮೃಗವಾಹಿನಿ, ಕೂಷ್ಮಾಂಡಿನಿ ಪೂಜಾ ಪಾರಾಯಣ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಮುಖ ಸಂಗೀತ ಮತ್ತು ನೃತ್ಯ ಶಾಲೆ ತೀರ್ಥಹಳ್ಳಿ ಇವರಿಂದ “ನೃತ್ಯ ವೈವಿಧ್ಯ”ಕಾರ್ಯಕ್ರಮ.
ಅಕ್ಟೋಬರ್ 19 ಗುರುವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸ್ಕಂದಮಾತಾ, ಮಕರ ವಾಹಿನಿ, ಲಲಿತಾ ಪಂಚಮಿ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಾನಿ ಆರ್ಕೆಸ್ಟ್ರಾ ಮಂಗಳೂರು ಇವರಿಂದ “ರಸಮಂಜರಿ ಆರ್ಕೆಸ್ಟ್ರಾ”
ಅಕ್ಟೋಬರ್ 20 ಶುಕ್ರವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಯೂರ ವಾಹಿನಿ, ಕಾತ್ಯಾಯಿನಿ ಪೂಜೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪಾವಂಜೆ ಇವರಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ.
ಅಕ್ಟೋಬರ್ 21 ಶನಿವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕಾಲರಾತ್ರಿ, ಅಶ್ವಾರೂಢಾ ಮಹಾಗೌರಿ, ಶಾರದಾ ಪೂಜೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಒಂದು ಮಲೆನಾಡು ಸಂಜೆ ಜಗದೀಶ ಕಣದ ಮನೆ ತಂಡದವರಿಂದ “ಸಂಗೀತ ಮತ್ತು ಹಾಸ್ಯ ರಸ ಸಂಜೆ”
ಅಕ್ಟೋಬರ್ 22 ಭಾನುವಾರ ದುರ್ಗಾಹೋಮ, ತ್ರಿಮೂರ್ತಿಪೂಜೆ, ವೃಷಭ ವಾಹಿನಿ, ಹೂವಿನ ಪೂಜೆ. ಬೆಳಗ್ಗೆ 10.30 ರಿಂದ ಶ್ರೀಮತಿ ರಾಜಲಕ್ಷ್ಮಿ ಬಿ ಜೋಶಿ ಶ್ರೀ ಕ್ಷೇತ್ರ ಹೊರನಾಡು ಮತ್ತು ಸಂಗಡಿಗರಿಂದ “ಸೌಂದರ್ಯ ಲಹರಿ”. ರಾತ್ರಿ ರಂಗ ಪೂಜೆ ನಂತರ ಸಂಗೀತ ಕಲಾವೃಂದ ಕಳಸ ಇವರಿಂದ “ಭಕ್ತಿಭಾವ ಗೀತಲಹರಿ”
ಅಕ್ಟೋಬರ್ 23 ಸೋಮವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಿಂಹ ವಾಹಿನಿ ಸಿದ್ದಿಧಾತ್ರಿ ಪೂಜಾ, ಆಯುಧ ಪೂಜಾ. ಸಂಜೆ ಈಗಲ್ ಐಸ್ ಕಳಸ ಇವರಿಂದ” ಡ್ಯಾನ್ಸ್ ಡ್ಯಾನ್ಸ್” ಕಾರ್ಯಕ್ರಮ.
ಅಕ್ಟೋಬರ್ 24 ಮಂಗಳವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಿಂಹ ವಾಹಿನಿ, ಚಂಡಿಕಾ ಪಾರಾಯಣ. ಮಧ್ಯಾಹ್ನ 3 ಕಳಸದ ರಾಜಬೀದಿಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಶ್ರೀದೇವಿಯ ವೈಭವಯುತ ಮೆರವಣಿಗೆಯು ಕಳಸ ರಾಜಬೀದಿಯಲ್ಲಿ ಸಾಗಿ ಕೋಟಿ ತೀರ್ಥದಲ್ಲಿ ಶ್ರೀದೇವಿಯ ತೆಪ್ಪೋತ್ಸನ ನಂತರ “ಶ್ರೀದೇವಿಯ ವಿಗ್ರಹ ವಿಸರ್ಜನೆ” ನಡೆಯಲಿದೆ.
ಕಾರ್ಯಕ್ರಮದ ಪ್ರತೀ ದಿನವೂ ಸಪ್ತಶತಿ ಪಾರಾಯಣ,ಮಂಗಳಾರತಿ, ತೀರ್ಥಪ್ರಸಾದ, ಅನ್ನದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.