ಕಳಸ ವೈವ್ ವರದಿ
ಉದ್ಯೋಗಕ್ಕಾಗಿ ಇಸ್ರೇಲ್ ನಲ್ಲಿರುವ ಕಳಸ ತಾಲೂಕಿನವರು ಯುದ್ದದ ನಡುವೆಯೂ ಸುರಕ್ಷಿತವಾಗಿದ್ದಾರೆ.
ಕಳಸ ತಾಲ್ಲೂಕಿನವರು ಅಲ್ಲಿ ನೆಲಸಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ತಾಲ್ಲೂಕು ಕಚೇರಿ ಸ್ಪಷ್ಟಪಡಿಸಿಲ್ಲವಾದರೂ ಅಲ್ಲಿರುವವರು ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮಂದಿಯನ್ನು ಸಂಪರ್ಕಿಸಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದ್ದಾರೆ.
ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಲವೀನಾ . ಬಾಳೆಖಾನ್ ಅನಿತಾ ಪಿಂಟೋ ಮಾವಿನಕೆರೆ ಗ್ರಾಮದ ಜ್ಯೋತಿ ಪಿಂಟೋ . ಮಾವಿನಕೆರೆ ಗ್ರಾಮದ ಸಂತೋμï ಪಿಂಟೋ . ಮಾವಿನಕೆರೆ ಗ್ರಾಮ ಮೊಮೀಟ ಪಿಂಟೋ ,
ತಾಲ್ಲೂಕಿನ ಇನ್ನೂ ಕೆಲವರು ಇಸ್ರೇಲ್ ನಲ್ಲಿದ್ದಾರೆ ಆದರೆ ಅವರ ಸ್ಪಷ್ಟವಾದ ಮಾಹಿತಿ ಇಲ್ಲವಾಗಿದ್ದು, ಅವರು ಕೂಡ ಸುರಕ್ಷಿತವಾಗಿದ್ದಾರೆ ಎನ್ನಲಾಗುತ್ತಿದೆ.
ಇಸ್ರೇಲ್ ನಲ್ಲಿರುವ ಹೆಚ್ಚಿನವರು ಹೋಂ ನರ್ಸ್ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಲವಿನಾ ಅವರ ಪತಿ ಸಂತೋಷ್ ಪ್ರತಿಕ್ರೀಯೆ ನೀಡಿ ಯುದ್ದ ನಡೆಯುವ ಸ್ಥಳಕ್ಕೂ ಪತ್ನಿ ಇರುವ ಸ್ಥಳಕ್ಕೂ 100 ಕಿಮೀ ದೂರದಲ್ಲಿದ್ದಾರೆ.ಅವರಿಗೆ ಯಾವುದೇ ರೀತಿಯ ಅಪಾಯ ಇಲ್ಲ.ಸೈರನ್ ಹಾಗೂ ರಾಕೆಟ್ ದಾಳಿಗಳ ಸದ್ದು ಕೇಳುತ್ತದೆ .ಈ ಬಗ್ಗೆ ನಮ್ಮ ಜೊತೆ ದೂರವಾಣಿ ಮುಖಾಂತರ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ.
ಅಲ್ಲದೆ ಇಸ್ರೆಲ್ ನಲ್ಲಿ ನೆಲೆಸಿರುವ ಕಳಸ ತಾಲ್ಲೂಕಿನ ಯಾರಿಗೂ ಕೂಡ ಯಾವುದೇ ರೀತಿಯ ಅಪಾಯ ಇಲ್ಲ.ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.