ಕಳಸ ಲೈವ್ ವರದಿ
ಕಳಸ ರೋಟರಿ ಕ್ಲಬ್ ಸಂಸ್ಥೆಯಿಂದ ಇಲ್ಲಿಯ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಲೇಡೀಸ್ ಹಾಸ್ಟೆಲ್ಗೆ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ವಿಚಾರ ಸಂಕಿರಣವನ್ನು ನಡೆಸಲಾಯಿತು.
ವಿಚಾರ ಸಂಕಿರಣವನ್ನು ಬೆಂಗಳೂರಿನ ಕಾರ್ತವ್ಯ ಎನ್ಜಿಒದ ರಾಕೇಶ್ ಮತ್ತು ನಾಗಾಭೂಷನ್ ನಡೆಸಿಕೊಟ್ಟರು. ಅಧ್ಯಕ್ಷೆ ಸಾವಿತ್ರಿ ಜಿ ಜೋಶಿ, ಕಾರ್ಯದರ್ಶಿ ಪಣೀಶ್ ಡಿ ಕೆ, ಮತ್ತು ಪ್ರಭಾಕರ ಗೌಡ, ಕೆ ಕೆ ಬಾಲಕೃಷ್ಣ, ಸಂದೀಪ್ ಬಿ ವಿ, ಅಭಿನಂದನ್ ಬಲ್ಲಾಳ್, ಪ್ರಸನ್ನ ಬಿ ಆರ್, ಕಿರಣ್ ಶೆಟ್ಟಿ ಇತರರು ಇದ್ದರು.
Related Stories
September 6, 2024