ಕಳಸ ಲೈವ್ ವರದಿ
ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಮತ್ತು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್ ಹಾವನ್ನು ಕಳಸದಲ್ಲಿ ಸೆರೆ ಹಿಡಿದು ರಕ್ಷಿಸಲಾಗಿದೆ.
ಕಳಸ ಕಲಶೇಶ್ವರ ದೇವಸ್ಥಾನದ ಬಳಿಯ ಚಂದ್ರು ಭಟ್ ಮನೆಯ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಾಗ ಹವ್ಯಾಸಿ ಉರಗ ತಜ್ಞ ರಿಜ್ವಾನ್ ಅವರನ್ನು ಕರೆಸಿ ಸೆರೆ ಹಿಡಿಯಲಾಯಿತು.
ಅಪರೂಪವಾಗಿ ಕಾಣಿಸಿಕೊಂಡ ಈ ಹಾವು ಅತ್ಯಂತ ಸೌಂದರ್ಯಯುತವಾಗಿತ್ತು. ಈ ಹಾವಿನ ವಿಶೇಷತೆ ಅಂದ್ರೆ, ತಲೆ ಮೇಲೆ ಬಿದ್ದ ನೀರನ್ನು ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದಾಗಿದೆ.
ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುವ ಬ್ಯಾಂಬೋ ಪಿಟ್ ವೈಫರ್ ಕಚ್ಚುವ ಹಾವಾಗಿದೆ. ಆದ್ರೆ, ಈ ಹಾವು ಕಡಿದರೆ ಸಾಯುವುದಿಲ್ಲ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ. ನಿದಾನವಾಗಿ ಹಾವು ಕಡಿತ ಸ್ಥಳದಿಂದ ಕೊಳೆತು ಹೋಗುವ ಸಾಧ್ಯತೆಗಳು ಇರುತ್ತದೆ.
ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣ ಸಿಗುವ ಈ ಹಾವು, ಸ್ಥಳಿಯ ಆಡು ಬಾಷೆಯಲ್ಲಿ ಹಸಿರು ಕಂದಡಿ ಎಂದು ಕರೆಯಲಾಗುತ್ತದೆ.ಇದು ಹೆಣ್ಣು ಹಾವು ಹಸಿರು ಬಣ್ಣದಲ್ಲಿ ಕಂಡು ಬಂದರೆ ಗಂಡು ಹಾವು ಕಂದು ಬಣ್ಣದಲ್ಲಿ ಇರುತ್ತದೆ.ಸೆಪ್ಟಂಬರ್ ಅಕ್ಟೋಬರ್ ಸಮಯದಲ್ಲಿ ಸಂತಾನೋತ್ಪತ್ತಿಯ ಸಮಯವಾಗಿರುವುದರಿಂದ ಈ ಸಮಯದಲ್ಲಿ ಈ ಹಾವು ಹೆಚ್ಚಾಗಿ ಕಣ್ಣಿಗೆ ಕಾಣ ಸಿಗುತ್ತದೆ.
ಅಪರೂಪದ ಹಾವನ್ನು ಸೆರೆ ಹಿಡಿದ ರಿಜ್ವಾನ್ ಅವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.