ಕಳಸ ಲೈವ್ ವರದಿ
ಸಂಸೆಯ ಆರ್ ಜಿ ಬಿ ಮೂವೀಸ್ ಶಾರ್ಟ್ ಫಿಲ್ಮ್ ತಂಡವು “ಇಂಡಿಯನ್ ಫಿಲ್ಮ್ ಹೌಸ್” ಆಯೋಜಿಸಿದ್ದ “ರಾಷ್ಟ್ರ ಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ” ಕನ್ನಡ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆರ್ ಜಿ ಬಿ ತಂಡದ ಬಾಳ್ಗಲ್ ಸಂಪತ್ ಆಚಾರ್ಯ ಅವರು ಉತ್ತಮ ನಟ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ತುಳಸೀಧರ ಆಚಾರ್ಯ ಅವರು ಉತ್ತಮ ನಿರ್ದೇಶಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ದೇಶದ ವಿವಿಧ ಭಾμÉಗಳಿಂದ, ರಾಜ್ಯಗಳಿಂದ ಸುಮಾರು ನೂರಕ್ಕು ಹೆಚ್ಚು ಕಿರು ಚಿತ್ರ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕನ್ನಡ ವಿಭಾಗದ ಕಿರು ಚಿತ್ರದಲ್ಲಿ ಸಂಸೆ ತಂಡ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಊರ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
Related Stories
October 6, 2024