ಕಳಸ ಲೈವ್ ವರದಿ
ಕಲ್ಮಕ್ಕಿ ಶ್ರೀ ಬಾಲಗಣಪತಿ ಸೇವಾ ಸಮಿತಿ ಮತ್ತು ಆದರ್ಶ ಯುವಕ ಸಂಘದ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸೋಮವಾರ ಬೆಳಿಗ್ಗೆ 10.15 ಕ್ಕೆ ಶ್ರೀ ಬಾಲಗಣಪತಿಯ ಪ್ರತಿಷ್ಠಾಪನೆ ನಡೆಯಿತು.ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.ರಾತ್ರಿ ರಂಗಪೂಜೆ ನಂತರ ಮಧುರ ಲಹರಿ ಕರೋಕೆ ಆರ್ಕೇಸ್ಟ್ರ ಇವರಿಂದ ಸಂಗೀತ ರಸಸಂಜೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ಮೂಡು ಗಣಪತಿ ಪೂಜೆ ಮಧ್ಯಾಹ್ನ ಮಹಾ ಮಂಗಳಾರತಿ ಅನ್ನಸಂತರ್ಪಣೆ.ರಾತ್ರಿ ಕಲ್ಮಕ್ಕಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಬುಧವಾರ ಬೆಳಿಗ್ಗೆ ಶ್ರೀ ಗಣಪತಿ ಹೋಮ ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ, ಅನ್ನಸಂತರ್ಪಣೆ ರಾತ್ರಿ ಈಗಲ್ ಐಸ್ ತಂಡ ಕಳಸ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಗುರುವಾರ ಮಧ್ಯಾಹ್ನ ಮಾಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಯ ನಂತರ ವಿಶೇಷ ಸಿಡಿಮದ್ದು ಪ್ರದರ್ಶನ ಹಾಗೂ ಹುಲಿ ನೃತ್ಯ ಪ್ರದರ್ಶನದೊಂದಿಗೆ ಶ್ರೀ ಸ್ವಾಮಿಯ ವೈಭವಯುತ ಮೆರವಣಿಗೆಯ ಮುಖಾಂತರ ಕಳಸ ರಾಜಬೀದಿಯಲ್ಲಿ ಸಾಗಿ ಕೋಟೆಹೊಳೆಯ ಕೋಟಿ ತೀರ್ಥದಲ್ಲಿ ಜಲಸ್ತಂಭನ.