ಕಳಸ ಲೈವ್ ವರದಿ
ಕಳಸ ಪಟ್ಟಣದಲ್ಲಿ ಮಾರುಕಟ್ಟೆ ದರಕ್ಕಿಂತ ಅಧಿಕ ದರದಲ್ಲಿ ಕೋಳಿ ಮಾಂಸವನ್ನು ಮಾರಾಟ ಮಾಡಿದರೆ ಪಂಚಾಯಿತಿ ವತಿಯಿಂದ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದೆ.
ಗ್ರಾಮ ಪಂಚಾಯಿತಿಯಲ್ಲಿ ಕೋಳಿ ಅಂಗಡಿಗಳ ಹರಾಜು ಹಾಕುವಾಗ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಿ ಟೆಂಡರ್ ಮಾಡಲಾಗಿತ್ತು. ಕಳಸ ಮಾಂಸದ ಮಾರುಕಟ್ಟೆಯಲ್ಲಿ ಅಕ್ಕಪಕ್ಕದ ಗ್ರಾಮಗಳಲ್ಲಿ ಮಾರಾಟ ಮಾಡುವ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಗ್ರಾ.ಪಂ ಗೆ ಬಂದ ಹಿನ್ನಲೆಯಲ್ಲಿ ಪ್ರತಿಯೊಂದು ಕೋಳಿ ಅಂಗಡಿಗೂ ನಿತ್ಯ ಮಾರುಕಟ್ಟೆ ದರಪಟ್ಟಿಯನ್ನು ಪಂಚಾಯಿತಿಯಿಂದಲೇ ಹಾಕಲಾಗುತ್ತಿದೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಂಗಡಿ ಮಾಲಿಕರು ಕೋಳಿ ಅಂಗಡಿಯಿಂದ ಆಗುತ್ತಿರುವ ಸಮಸ್ಯೆ ಮತ್ತು ಆಗುವ ಖರ್ಚು ವೆಚ್ಚಗಳ ಬಗ್ಗೆ ತಿಳಿಸಿ ಪ್ರತಿ ಕೆಜಿಗೆ 25ರಿಂದ 30 ರೂ ಹೆಚ್ಚವರಿ ಬೆಲೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದ್ದರು.ಅಧಿಕ ದರದಲ್ಲಿ ಕೋಳಿ ಮಾಂಸ ಮಾರುತ್ತಿರುವುದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ.ಆದ್ದರಿಂದ ಮಾರುಕಟ್ಟೆ ದರದಲ್ಲೇ ಕೋಳಿ ಮಾಂಸ ಮಾರಾಟ ಮಾಡಬೇಕು. ಒಂದು ವೇಳೆ ಅಧಿಕ ದರಕ್ಕೆ ಮಾರಾಟ ಮಾಡಿದರೆ ಮಾರಾಟವನ್ನು ಸ್ಥಗಿತಗೊಳಿಸಿ ಗ್ರಾಪಂನಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲಿಕರಿಗೆ ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ.