ಕಳಸ ಲೈವ್ ವರದಿ
ಕಳಸ ಮುಖ್ಯ ರಸ್ತೆಯಲ್ಲಿರುವ ಕಟ್ಟಡವೊಂದು ಬುಧವಾರದ ಬೆಳಿಗ್ಗೆ ಕುಸಿದು ಬಿದ್ದಿದೆ.
ಮುಖ್ಯ ರಸ್ತೆಯಲ್ಲಿ ಹಳೆಯದಾದ ಕಟ್ಟಡದಲ್ಲಿ ನಾಲ್ಕು ಮಳಿಗೆಯನ್ನು ಬಾಡಿಗೆ ಕೊಡಲಾಗಿತ್ತು.ಇದರಲ್ಲಿ ಬ್ಯೂಟಿ ಪಾರ್ಲರ್, ಸ್ಟುಡಿಯೋ, ಬೈಕ್ ಬಿಡಿ ಭಾಗಗಳ ಅಂಗಡಿ ಹಾಗೂ ಒಂದು ಕುಟುಂಬ ಇದರಲ್ಲಿ ವಾಸ ಮಾಡುತ್ತಿದ್ದರು.
ಹಳೆಯದಾದ ಈ ಕಟ್ಟಡ ಕಳೆದ ವರ್ಷನೇ ಬಿರುಕು ಬಿಟ್ಟಿತ್ತು. ಆದರೂ ಅದನ್ನು ಬಾಡಿಗೆಗೆ ನೀಡಲಾಗಿತ್ತು. ಬುಧವಾರ ಬೆಳಿಗ್ಗೆ ಕಟ್ಟಡದಲ್ಲಿ ಶಬ್ದ ಕೇಳಿದ ಕೂಡಲೇ ಅದರಲ್ಲಿ ವಾಸ ಮಾಡುತ್ತಿದ್ದ ಕುಟುಂಬ ಕೂಡಲೇ ಹೊರಗಡೆ ಓಡಿ ಬಂದಿದ್ದಾರೆ.ನಂತರ ಕಟ್ಟಡದ ಒಂದು ಬಾಗ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯ ಆಗಲಿಲ್ಲ.