ಕಳಸ ಲೈವ್ ವರದಿ
ಕಳಸದ ಜಗದೀಶ್ವರ ಕ್ರೈಸ್ತಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ಶಿಕ್ಷಕರನ್ನು ಭಾನುವಾರ ಗೌರವಿಸಲಾಯಿತು.
ಭಾನುವಾರದ ಪೂಜಾ ವಿದಿಯ ನಂತರ ಧರ್ಮ ಗುರುಗಳಾದ ಆಗ್ನೆಲ್ ಫೆನಾರ್ಂಡಿಸ್ ಅವರ ಮಾರ್ಗದರ್ಶನದಂತೆ ಶಿಕ್ಷಕರಾದ ಅಲ್ವಿನ್ ಅಶೋಕ್ ಫೆನಾರ್ಂಡಿಸ್, ಶ್ರೀಮತಿ ಹೆಲೆನ್ ಲಾವಿಯಾ ಕಾರ್ಡೋಜಾ, ಶ್ರೀಮತಿ ಲಿಸ್ಸಿ ಟಿ.ಆರ್, ಶ್ರೀಮತಿ ವೀಣಾ ಜೇನ್ ಮೋನಿಸ್, ಶ್ರೀಮತಿ ವಿಲ್ಮಾ ದಾಂತೀಸ್, ಶ್ರೀಮತಿ ಥೆರೆಸಾ ಕುಟಿನ್ಹಾ, ಶ್ರೀಮತಿ ರೂಪಾ ಸನ್ನಿ, ಶ್ರೀಮತಿ ಐರಿನ್ ಲೋಬೋ, ಶ್ರೀಮತಿ ಶೈಲಾ ಥಾಮಸ್, ಶ್ರೀಮತಿ ಲವಿತಾ ದಾಂತೀಸ್, ಶ್ರೀಮತಿ ಲೀನಾ ರೋಡ್ರಿಗಸ್ ಇವರನ್ನು ಗೌರವಿಸಲಾಯಿತು.