ಕಳಸ ಲೈವ್ ವರದಿ
ಪರವಾನಿಗೆ ಇಲ್ಲದೆ ಇಟ್ಟುಕೊಂಡಿದ್ದ ಬಂದೂಕನ್ನು ಕಳಸ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಖಚಿತ ಮಾಹಿತಿ ಮೇರೆಗೆ ಕಳಸ ಪಿ.ಎಸ್.ಐ. ನಿತ್ಯಾನಂದ ಮತ್ತು ಸಿಬ್ಬಂದಿಗಳು ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾವಿನಕೆರೆ ಗ್ರಾಮದ ಕೊಂಡದಮನೆ ಎಂಬಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿ, ಯಾವುದೇ ಬಂದೂಕು ಪರವಾನಗಿ ಇಲ್ಲದೇ ಮನೆಯ ಹಿಂಭಾಗದ ಕೋಣೆಯಲ್ಲಿ ಸೌದೆಯ ಕೆಳಗೆ ಬಚ್ಚಿಟ್ಟಿದ್ದ ಒಂದು Sಃಒಐ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂದೂಕನ್ನು ಕಾನೂನು ಬಾಹಿರವಾಗಿ ಹೊಂದಿದ್ದ ವ್ಯಕ್ತಿ ಮತ್ತು ಆ ಬಂದೂಕನ್ನು ಮಾರಾಟ ಮಾಡಿದ್ದ ಇನ್ನೊಂದು ವ್ಯಕ್ತಿಯ ವಿರುದ್ದ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.