ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕಳಸ, ಹೊರನಾಡು, ಮುನ್ನೂರ್ ಪಾಲ್ ದೇವಸ್ಥಾನ ಹಾಗೂ ವಿಶ್ವಕರ್ಮ ಸಮಾಜದವರಿಂದ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ವರಮಹಾಲಕ್ಷ್ಮೀ ವ್ರತ, ಲಕ್ಷದೂರ್ವಾರ್ಚನೆ ಮತು ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.
ಸಂಜೆ 3 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ದ ಕಲಾವಿದರ ಭಾಗವಹಿಸುವಿಕೆಯಲ್ಲಿ ಕರ್ಣಾರ್ಜುನ ಎಂಬ ಯಕ್ಷಗಾನ ತಾಳ ಮದ್ದಳೆ ನಡೆಯಿತು.
ಕಳಸ ಕಲಶೇಶ್ವರ ದೇವಸ್ಥಾನದ ಸರ್ವಾಂಗಸುಂದರಿ ಅಮ್ಮನವರ ಸನ್ನಿದಾನದಲ್ಲಿ ಸರ್ಕಾರದ ನಿಯಮಾವಳಿಯಂತೆ ವರಮಹಾಲಕ್ಷ್ಮೀ ವ್ರತ ನಡೆಯಿತು. ನೂರಾರು ಮುತ್ತೈದೆಯರಿಗೆ ಬಾಗಿನ ನೀಡಲಾಯಿತು.
ಮುನ್ನೂರ್ ಪಾಲ್ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತ ಆಚರಣೆಯನ್ನು ಮಾಡಲಾಯಿತು. ಕಳಸ ವಿಶ್ವಕರ್ಮ ಸಮಾಜದವರಿಂದ ವಿಶ್ವಕರ್ಮ ಸಮುದಾಯ ಭವನದಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಸಮಾಜದ ಬಾಂಧವರು ಆಚರಿಸಿದರು.