ಕಳಸ ಲೈವ್ ವರದಿ
ಈ ಬಾರಿಯ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಕಳಸ ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳ ಪಥ ಸಂಚಲನ ಹಾಗು ಯಾವುದೇ ಆಟೋಟ ಸ್ಪರ್ಧೆಗಳಿಲ್ಲದೆ ನೀರಸವಾಗಿ ಕಂಡು ಬಂದಿದ್ದು, ಇದರಿಂದ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರತೀ ಬಾರಿ ಸ್ವಾಂತ್ರ್ಯೋತ್ಸವದ ಸಂದರ್ಭದಲ್ಲಿ ಎಲ್ಲಾ ಶಾಲಾ ಕಾಲೇಜು ಮಕ್ಕಳು ಕಳಸ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ಮಾಡುತ್ತಿದ್ದರು.ನೂರಾರೂ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸುತ್ತ ಅವರಿಗೆ ಜೈಕಾರ ಹಾಕುತ್ತಾ ಮುಖ್ಯ ರಸ್ತೆಯಲ್ಲಿ ಶಿಸ್ತು ಬದ್ಧವಾದ ಪಥ ಸಂಚಲನ ನೋಡುವುದೇ ಕಣ್ಣಿಗೆ ಹಬ್ಬ.ಇದನ್ನು ನೋಡಲೆಂದೆ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಸಾರ್ವಜನಿಕರು ನಿಲ್ಲುತ್ತಿದ್ದರು.ಕೆಲ ಸಂಘ ಸಂಸ್ಥೆಗಳಿಂದ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚುತ್ತಿದ್ದರು.
ಇದೆಲ್ಲ ಮುಗಿದ ಕೂಡಲೆ ಕೆಲ ಸಂಘ ಸಂಸ್ಥೆಗಳಿಂದ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯುತ್ತಿದ್ದವು.ಇದರಿಂದ ನೂರಾರು ಕ್ರೀಡಾ ಪ್ರೇಮಿಗಳು ಆಟದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದರು.
ಆದರೆ ಈ ಬಾರಿ ಪೂರಕವಾದ ವಾತಾವರಣ ಇದ್ದರೂ ಕೂಡ ಮಕ್ಕಳ ಪಥ ಸಂಚಲನ ಹಾಗೂ ಆಟೋಟ ಸ್ಪರ್ಧೆಗಳು ಇಲ್ಲದೆ ಸ್ವಾತಂತ್ರ್ಯ ದಿನಾಚರಣೆಯ ಕಳೆಯೇ ಮಾಯವಾಗಿದೆ. ಪ್ರತಿಯೊಂದು ಊರುಗಳಲ್ಲಿ ರಾಷ್ಟ್ರೀಯ ಹಬ್ಬವನ್ನು ವರ್ಷದಿಂದ ವರ್ಷಕ್ಕೆ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದರೆ, ಕಳಸದಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಮಾಡುತ್ತಿರುವ ಕಾರ್ಯಕ್ರಮಗಳನ್ನು ಕೈಬಿಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಅಸಮಾದಾನಗೊಂಡಿದ್ದಾರೆ.
Related Stories
September 6, 2024