ಕಳಸ ಲೈವ್ ವರದಿ
ಕಳಸ ತಾಲೂಕಿನ ಸಂಸೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಯಂತ್ರಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕಾ ಕಾರ್ಯಕ್ರಮ ಗುರುವಾರ ನಡೆಯಿತು.
ಸಂಸೆಯಲ್ಲಿನ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಒಡೆತನದ ಸಂಸೆ ಹೊಸನೆಲ ಗದ್ದೆಯಲ್ಲಿ ನಡೆದ ಯಂತ್ರಶ್ರೀ ಭತ್ತನಾಟಿ ಪ್ರಾತ್ಯಕ್ಷಿಕಾ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಕಾರ್ಯಕ್ರಮದ ಉದ್ಘಾಟಿಸಿ ಯಂತ್ರಶ್ರೀ ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶುಭ ಹಾರೈಸಿದರು.
ಊರಿನ ಮುಖಂಡ ಕೀರ್ತಿಜೈನ್ ಮಾತನಾಡಿ ಯಾಂತ್ರಿಕೃತ ಭತ್ತನಾಟಿ ಮಾಡುವುದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ಕಾರ್ಮಿಕರ ಕೊರತೆಯ ಸಮಸ್ಯೆಯು ಬಗೆ ಹರಿಯುತ್ತದೆ. ಭತ್ತ ಈಗಿನ ಸಮಯದಲ್ಲಿ ನಶಿಸುತ್ತಿರುವ ಬೆಳೆ ಇದನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಾಕರ ವಹಿಸಿದ್ದರು. ತ್ರೈ ರತ್ನ ಭವನದ ವ್ಯವಸ್ಥಾಪಕರಾದ ಪ್ರಕಾಶ್ ಜೈನ್, ಊರಿನ ಗಣ್ಯರು ಸುದರ್ಶನ್, ಯಂತ್ರಶ್ರೀ ಯೋಜನಾಧಿಕಾರಿಗಳಾದ ಜಯಾನಂದ್, ಕಳಸ ತಾಲೂಕಿನ ಯೋಜನಾಧಿಕಾರಿಗಳು ಸುರೇಶ್, ಮುಖಂಡರಾದ ನಿಂಗಪ್ಪ ಅಗಸರ, ರಾಜೇಂದ್ರ ಬಲ್ಲಾಳ್, ತಾಂತ್ರಿಕ ಅಭಿಯಂತರರಾದ ಅವಿನಾಶ್, ಕೃಷಿ ಮೇಲ್ವಿಚಾರಕರಾದ ರವಿಚಂದ್ರ, ವಲಯದ ಮೇಲ್ವಿಚಾರಕರಾದ ಹರೀಶ್,ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಮಹೇಶ್, ವಿಪತ್ತು ಘಟಕದ ಸದಸ್ಯರು ಹೆರಾಲ್ಡ್, ಸುಧಾಕರ್, ಪ್ರಬಂಧಕರಾದ ವಿಶ್ವನಾಥ್, ಸ್ಥಳೀಯ ಸೇವಾಪ್ರತಿನಿಧಿಗಳಾದ ಅಶ್ವಿನಿ, ವಿನುತಾ, ಉಷಾ ಇದ್ದರು.