ಕಳಸ ಲೈವ್ ವರದಿ
ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಕಳಸ ಶ್ರೀಕಲಶೇಶ್ವರ ಸ್ವಾಮಿ ಭಕ್ತರ ಆರಾಧ್ಯ ದೇವರು. ಪ್ರತಿ ನಿತ್ಯ ಸ್ಥಳೀಯ, ರಾಜ್ಯ, ಹೊರ ರಾಜ್ಯಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಮಾಡಿ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ. ತನ್ನ ಇಷ್ಟಾನುಪ್ರಕಾರ ದೇವರ ಕಾಣಿಕೆ ಹುಂಡಿಗೆ ಕಾಣಿಕೆಯನ್ನು ಹಾಕುತ್ತಾರೆ. ಆದರೆ ಭಕ್ತನೋರ್ವ 2000 ರೂ ಮಾದರಿಯ ಜೆರಾಕ್ಸ್ ನೋಟು ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ಕಲಶೇಶ್ವರ ದೇವರು ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿಯ ಪರ್ಕಾವಣೆ ನಡೆಯಿತು. ಈ ಪರ್ಕಾವಣೆಯ ಸಂದರ್ಭದಲ್ಲಿ 2000 ರೂ ಮಾದರಿಯ ಜೆರಾಕ್ಸ್ ನೋಟು ಬೆಳಕಿಗೆ ಬಂದಿದೆ.
2000 ರೂ ಮಾದರಿಯನ್ನೇ ಹೋಲುವಂತೆ ಕಲ್ಲರ್ ಜೆರಾಕ್ಸ್ ಮಾಡಿ ಭಕ್ತನೋರ್ವ ಕಾಣಿಕೆ ಹುಂಡಿಗೆ ಹಾಕಿದ್ದಾನೆ.ಇದನ್ನು ಗಮನಿಸಿದ ಆಡಳಿತ ಮಂಡಳಿ ಜೆರಾಕ್ಸ್ ನೋಟನ್ನು ಹರಿದು ಹಾಕಿದ್ದಾರೆ.