ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ವಿಶ್ವನಾಥ ಹಾಗೂ ಉಪಾಧ್ಯಕ್ಷರಾಗಿ ಕೆ.ಎ.ರಂಗನಾಥ್ ಆಯ್ಕೆಯಾದರು.
ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಉಷಾ ವಿಶ್ವನಾಥ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕೆ.ಎ.ರಂಗನಾಥ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಆದರೆ ಬೇರೆ ಯಾರೂ ಕೂಡ ನಾಮ ಪತ್ರ ಸಲ್ಲಿಕೆ ಮಾಡದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಭಿನಂದನಾ ಸಭೆಯಲ್ಲಿ ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷನ್, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಎಂ.ಎ.ಶೇಷಗಿರಿ, ಗಿರೀಶ್ ಹೆಮ್ಮಕ್ಕಿ, ಸುಜಯ ಸದಾನಂದ, ಕಾರ್ತಿಕ್ ಶಾಸ್ತ್ರೀ, ವೆಂಕಟಸುಬ್ಬಯ್ಯ, ಪಂ ಸದಸ್ಯ ಸಂತೋಷ್ ಹಿನಾರಿ, ಭಾಸ್ಕರ್, ಪಾಪಣ್ಣ, ರವಿ ಇತರರು ಇದ್ದರು.