ಕಳಸ ಲೈವ್ ವರದಿ
ಇಲ್ಲಿಯ ಇಡಕಿಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯ ಹೆಮ್ಮಕ್ಕಿ ರವೀಂದ್ರ ಆಯ್ಕೆ ಯಾಗಿದ್ದಾರೆ.
ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜಗದೀಶ್ ಭಂಡಾರಿ ವಿರುದ್ಧ ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯ ಹೆಮ್ಮಕ್ಕಿಯ ರವೀಂದ್ರ ಜಯಗಳಿಸಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ಇಡಕಿಣಿ ಪಂಚಾಯಿತಿಯ 11 ಸದಸ್ಯರು ಹಕ್ಕು ಚಲಾಯಿಸಿದರು.ಸಾಮಾನ್ಯ ವರ್ಗದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರವೀಂದ್ರ 6 ಮತ ಪಡೆದು ವಿಜಯಶಾಲಿ ಆದರು.ಹಾಲಿ ಅಧ್ಯಕ್ಷರಾಗಿದ್ದ ಜಗದೀಶ್ ಭಂಡಾರಿ 5 ಮತ ಪಡೆದು ಸೋಲು ಅನುಭವಿಸಿದರು.
ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಅವಿರೋಧವಾಗಿ ಆಯ್ಕೆ ಆದರು.ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಶೇಷಗಿರಿ, ನಾಗಭೂಷಣ್, ಗಿರೀಶ್, ನಾಗೇಶ್, ಜಯಂತ್, ಸುಂದರೇಶ್ ಚುನಾವಣೆ ನಂತರ ಗೆಲುವಿನ ನಗೆ ಬೀರಿದರು.