ಕಳಸ ಲೈವ್ ವರದಿ
ಕಳಸ ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಮನಸಿಕ ಅಸ್ವಸ್ಥನೊಬ್ಬನನ್ನು ಕಳಸದ ಸುನೀಲ್, ಗೋಪಾಲಚಾರ್, ಆನಂದ, ಕಿಶೋರ್ ಸೇರಿ ಸ್ವಚ್ಚ ಗೊಳಿಸಿ ಮಾನವೀಯತೆ ಮೆರೆದಿದ್ದಾರೆ.
ಕೊಳಕಾದ ಬಟ್ಟೆ, ಗಡ್ಡ, ಕೂದಲು ಬಿಟ್ಟುಕೊಂಡು ಪಟ್ಟಣದ ಎಲ್ಲೆಂದರಲ್ಲಿ ತಿರುಗಾಡಿಕೊಂಡು ಯಾರಾದರು ಕೊಟ್ಟ ತಿಂಡಿ, ಊಟಗಳನ್ನು ತಿಂದುಕೊಂಡು, ರಾತ್ರಿಯಾಗುತ್ತಿದ್ದಂತೆ ಎಲ್ಲಾದರೊಂದು ಕಡೆ ಮಲಗಿ ಬೆಳಕು ಮಾಡುತ್ತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಸುನೀಲ್ ಮತ್ತು ಗೋಪಾಲಚಾರ್ ಕರೆದುಕೊಂಡು ಬಂದು ಸ್ನಾನ, ಕಟ್ಟಿಂಗ್ ಶೇವಿಂಗ್ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಸ್ವಚ್ಚ ಗೊಳಿಸಿದರು.
ಈತ ತಮಿಳು ಮಾತನಾಡುತ್ತಿರುವುದರಿಂದ ತಮಿಳು ನಾಡಿನವನು ಎಂದು ಅಂದಾಜು ಮಾಡಬಹುದು ಹೆಸರು ಕೇಳಿದಾಗ ಗಣೇಶ ಎಂದು ಹೇಳುತ್ತಾನೆ.
ಎಲ್ಲೆಂದರಲ್ಲಿ ತಿರುಗಾಡುತ್ತಿದ್ದ ಈತನನ್ನು ಸ್ವಚ್ಚ ಮಾಡಿದ್ದೇವೆ.ಊಟ ತಿಂಡಿ ಕೊಟ್ಟಿದ್ದೇವೆ.ಯಾರಾದರೂ ಸಹಕರಿಸಿದರೆ ಈತನನ್ನು ಆಶ್ರಮಕ್ಕೆ ಸೇರಿಸಬಹುದು ಎಂದು ಸುನೀಲ್ ಮತ್ತು ಗೋಪಾಲಚಾರ್ ಹೇಳುತ್ತಾರೆ.