ಕಳಸ ಲೈವ್ ವರದಿ
ಚಾಲಕನ ನಿಯಂತ್ರಣ ತಪ್ಪಿ ಇನ್ನೋವ ಕಾರೊಂದು ಮನೆಗೆ ನುಗ್ಗಿದ ಘಟನೆ ಭಾನುವಾರ ಕಳಸ ತಾಲ್ಲೂಕಿನ ಕಲ್ಮಕ್ಕಿ ಎಂಬಲ್ಲಿ ನಡೆದಿದೆ ಪರಿಣಾಮ ಚಾಲಕ ಸೇರಿದಂತೆ 10 ಮಂದಿಗೆ ಗಾಯಗಳಾಗಿದೆ.
ಗಾಯಗೊಂಡವರು ಕೋಲಾರದ ಧನುμï, ವಿಶ್ವಾಸ್, ರಾಮಕೃಷ್ಣ, ರಮೇಶ, ಯಶಸ್ವಿನಿ, ಸರಸ್ವತಿ, ಪದ್ಮ, ಲಕ್ಷ್ಮಮ್ಮ, ಭಾರತಿ, ಸೃಷ್ಟಿ ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ ಒಂಬತ್ತು ಮಂದಿ ಕೋಲಾರದಿಂದ ಹೊರನಾಡಿಗೆ ಹೋಗುತ್ತಿರುವ ಇನೋವಾ ಕಾರು ಕಲ್ಮಕ್ಕಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದಿದೆ.
ಕಾರಿನಲ್ಲಿದ್ದ ಡ್ರೈವರ್ ಸೇರಿದಂತೆ 10 ಪ್ರಯಾಣಿಕರಿಗೆ ಗಾಯಗಳಾಗಿದೆ. ಕೂಡಲೇ ಸ್ಥಳಕ್ಕೆ ಬಂದ 112 ಹಾಗೂ ಸ್ಥಳಿಯರು ಮತ್ತು ಕಳಸ ಪೆÇಲೀಸ್ ಠಾಣೆಯ ಪಿಎಸ್ಐ ಗಜೇಂದ್ರ ಹಾಗೂ ಎಎಸ್ಐ ಮೋಹನ್ ರಾಜಣ್ಣ ಕೂಡಲೇ ಪ್ರಯಾಣಿಕರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಹೆಚ್ಚಿನ ಚಿಕಿತೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.